ನಾರಾಯಣ್ಪುರ, ಫೆ 11 (DaijiworldNews/HR): ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಛತ್ತೀಸ್ಗಢದ ನಾರಾಯಣ್ಪುರ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೀಡಾದವರನ್ನು ಬಿಜೆಪಿ ನಾರಾಯಣ್ಪುರ ಜಿಲ್ಲಾ ಘಟಕದ ಉಪಾಧ್ಯಕ್ಷ ಸಾಗರ್ ಸಾಹು ಎಂದು ಗುರುತಿಸಲಾಗಿದ್ದು, ಈ ಕೃತ್ಯದ ಹಿಂದೆ ನಕ್ಸಲರ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಛೋಟೆಡೊಂಗರ್ ಗ್ರಾಮದಲ್ಲಿ ತಮ್ಮ ಮನೆಯಲ್ಲಿದ್ದಾಗ ರಾತ್ರಿ ಸುಮಾರು 8 ಗಂಟೆಗೆ ಇಬ್ಬರು ದುಷ್ಕರ್ಮಿಗಳು ಬಂದು ಕುಟುಂಬ ಸದಸ್ಯರ ಎದುರುಗಡೆಯೇ ಸಾಹು ಮೇಲೆ ಗುಂಡು ಹಾರಿಸಿದ್ದಾರೆ. ತಕ್ಷಣ ಅವರನ್ನು ನಾರಾಯಣ್ಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಮೃತಪಟ್ಟಿದ್ದಾರೆ.