ಹೈದರಾಬಾದ್, ಫೆ 11 (DaijiworldNews/HR): ಡಾ.ಬಿ.ಆರ್.ಅಂಬೇಡ್ಕರ್ ಅವರು ಈಗ ಜೀವಂತವಾಗಿ ಇದ್ದಿದ್ದರೆ ಅವರನ್ನು ನಾನು ಕೊಲ್ಲುತ್ತಿದ್ದೆ ಎಂದು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹಮಾರಾ ಪ್ರಸಾದ್ ಎಂಬಾತ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಪುಸ್ತಕವೊಂದನ್ನು ಹಿಡಿದುಕೊಂಡು ಹಮಾರಾ ಪ್ರಸಾದ್ ಗಾಂಧೀಜಿಯನ್ನು ಗೋಡ್ಸೆ ಕೊಂದಂತೆ, ಒಂದು ವೇಳೆ ಅಂಬೇಡ್ಕರ್ ಈಗ ಜೀವಂತವಾಗಿ ಇದ್ದಿದ್ದರೆ ಅವರನ್ನು ನಾನು ಕೊಲ್ಲುತ್ತಿದ್ದೆ ಎಂದು ವಿಡಿಯೋ ಮಾಡಿದ್ದಾರೆ.