ಕೇರಳ,ಮಾ.14(AZM):ಕೇರಳದ ಮಲಪ್ಪುರಂ ನಿವಾಸಿಯಾಗಿರುವ ಏಳರ ಹರೆಯದ ಬಾಲಕನೋರ್ವನ ಶರೀರದಲ್ಲಿ ವೆಸ್ಟ್ ನೈಲ್ ಎಂಬ ವೈರಸ್ ಪತ್ತೆಯಾಗಿದೆ.
ಸದ್ಯ ರೋಗಪೀಡಿತ ಬಾಲಕನನ್ನು ಕಲ್ಲಿಕೋಟೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ವರಸ್ ಕುರಿತು ಪರಿಶೀಲನೆ ನಡೆಸಲು ಕೇಂದ್ರ ಸರಕಾರ ರಾಜ್ಯಕ್ಕೆ ಪ್ರತಿನಿಧಿಗಳ ತಂಡವನ್ನು ಈಗಾಗಲೇ ರವಾನಿಸಿದ್ದು, ಈ ಕುರಿತು ಅತ್ಯಂತ ಸೂಕ್ಷ್ಮವಾಗಿ ಎಲ್ಲವನ್ನೂ ಪರಿಶೀಲಿಸಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ಕಾಯಿಲೆಯ ಹರಡುವಿಕೆಯನ್ನು ತಡೆಯಲು ಕೇರಳ ಸರಕಾರಕ್ಕೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ತಿಳಿಸಿದ್ದಾರೆ. ರಾಜ್ಯಕ್ಕೆ ಈಗಾಗಲೇ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಾಲ್ವರು ಸದಸ್ಯರನ್ನು ಕಳುಹಿಸಲಾಗಿದೆ.
ವೆಸ್ಟ್ ಲೈನ್ ಎಂಬ ವೈರಸ್ ಸೊಳ್ಳೆಯಿಂದ ಮಾನವ ಶರೀರಕ್ಕೆ ಹರಡುತ್ತದೆ. ಇದು ಉತ್ತರ ಅಮೆರಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವ ವೈರಸ್ ಆಗಿದೆ. ವೆಸ್ಟ್ ನೈಲ್ ವೈರಾಣು ಕಾಯಿಲೆಯಿಂದ ಬಳಲುವವರಲ್ಲಿ ಜ್ವರ, ತಲೆನೋವು, ಮೈಕೈನೋವು, ತಲೆಸುತ್ತು, ವಾಂತಿ ಹಾಗೂ ಕೆಲವೊಮ್ಮೆ ಚರ್ಮ ತುರಿಕೆ ಮತ್ತು ದೇಹಗಳ ನರಗಳ ಊದುವಿಕೆಯ ಲಕ್ಷಣಗಳು ಕಂಡುಬರುತ್ತದೆ.