ಬೆಂಗಳೂರು,ಫೆ 11 ( DaijiworldNews/MS):ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಕೇಂದ್ರ ಚುನಾವಣಾ ಆಯೋಗದ ಮೂವರು ಅಧಿಕಾರಿಗಳ ತಂಡ ರಾಜ್ಯಕ್ಕೆ ಭೇಟಿ ಸಿದ್ಧತೆಗೆಳ ಬಗ್ಗೆ ಪರಿಶೀಲನೆ ನಡೆಸಿದೆ.
ಆಯೋಗ ಉಪ ಮುಖ್ಯ ಆಯುಕ್ತ ಅಜಯ್ ಬಾಡು ನೇತೃತ್ವದ ತಂಡಗಳು ಯಾದಗಿರಿ ಜಿಲ್ಲೆ, ಶುಭ್ರ ಸಕ್ಸೇನಾ ತಂಡ ಚಾಮರಾಜನಗರ., ಸ್ವೀಪ್ ನಿರ್ದೇಶಕ ಸಂತೋಷ್ ಅಜ್ಮೇರ ತಂಡ ಬೆಂಗಳೂರಿನಲ್ಲಿ ಜಿಲ್ಲಾ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ.
ಈ ತಂಡಗಳು ಇವಿಎಂ ಮತ್ತು ವಿವಿಪ್ಯಾಟ್ಗಳ ಬಗ್ಗೆ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿದ್ದಾರೆ. ಕಲಬುರ್ಗಿ, ಚಾಮರಾಜನಗರ ಜಿಲ್ಲಾಧಿಕಾರಿ ಜತೆಗೂ ಸಭೆ ನಡೆಸಿದ್ದಾರೆ. ತಂಡದ ಜತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಕೂಡ ಇದ್ದರು ಎಂದು ಮೂಲಗಳು ತಿಳಿಸಿವೆ.