ಬೆಂಗಳೂರು, ಫೆ 11 ( DaijiworldNews/MS): ಮಂಗಳೂರಿನಲ್ಲಿ ಅಮಿತ್ ಶಾ ನಡೆಸಬೇಕಿದ್ದ ರೋಡ್ ಶೋ ರದ್ದುಗೊಂಡಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ ಅವರು , ಮಂಗಳೂರು ನಗರದಲ್ಲಿ ರೋಡ್ ಶೋ ಮೂಲಕ ಅಮಿತ್ ಶಾ ಪ್ರಚಾರ ಮಾಡಬೇಕಿತ್ತು ಆದರೆ ಕಾನೂನು ಸುವ್ಯವಸ್ಥೆಯ ಸಮಸ್ಯೆ ಎದುರಾದ ಕಾರಣಕ್ಕಾಗಿ ಇದು ರದ್ದಾಗಿದೆ. ಇದು ರಾಜ್ಯಕ್ಕೆ ದೊಡ್ಡ ಅವಮಾನ. ರಾಜ್ಯದಲ್ಲಿ ಕೇಂದ್ರ ಗೃಹ ಸಚಿವರಿಗೆ ಭದ್ರತೆಯಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾರಿಗೆ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಅಧ್ಯಕ್ಷರ ಗಾಡಿಯನ್ನೇ ಎತ್ತಿ ಬಿಸಾಡಿದರು. ಬಡವರ ಮಕ್ಕಳನ್ನು ಇಂತಹ ಕೃತ್ಯಗಳಿಗೆ ಇಳಿಸಿ ಬಲಿ ತೆಗೆದುಕೊಳ್ತಿದ್ದಾರೆ. ಹೀಗೆ ಗಣ್ಯರಿಗೆ ಕಾನೂನು ಸುವ್ಯವಸ್ಥೆ ತೊಡಕು ಎದುರಾದರೆ ಇನ್ನು ಸಾಮಾನ್ಯರ ಕಥೆ ಏನು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.