ನವದೆಹಲಿ, ಫೆ 12 (DaijiworldNews/HR): ಇತಿಹಾಸದಲ್ಲೇ ಮೊದಲ ಬಾರಿಗೆ ಬರೋಬ್ಬರಿ 500 ವಿಮಾನಗಳ ಖರೀದಿಗೆ ಏರ್ ಇಂಡಿಯಾ ಮುಂದಾಗಿದೆ ಎಂದು ವರದಿ ತಿಳಿಸಿವೆ.
12,378 ಕೋಟಿ ರೂ.(150 ಬಿಲಿಯನ್ ಡಾಲರ್) ವೆಚ್ಚದಲ್ಲಿ 500 ವಿಮಾನಗಳ ಖರೀದಿಗಾಗಿ ಟಾಟಾ ಸನ್ಸ್ ಮಾಲಕತ್ವದ ಏರ್ ಇಂಡಿಯಾ ಕಂಪೆನಿಯು ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಮತ್ತು ಏರ್ಬಸ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಇನ್ನು 500 ವಿಮಾನಗಳಲ್ಲಿ 430 ನ್ಯಾರೋ ಬಾಡಿ ವಿಮಾನಗಳು, 70 ವೈಡ್ ಬಾಡಿ ವಿಮಾನಗಳು ಸೇರಿವೆ. ಈ ಪೈಕಿ 250 ವಿಮಾನಗಳು ಏರ್ಬಸ್ ಮತ್ತು 250 ಬೋಯಿಂಗ್ ತಯಾರಿಸಿ ಕೊಡಲಿವೆ.