ನೋಯ್ಡಾ, ಫೆ 12 (DaijiworldNews/DB): ಮನೆಯೊಂದರಲ್ಲಿ ಎಲ್ಪಿಜಿ ಸಿಲಿಂಡರ್ ಸ್ಪೋಟಗೊಂಡು ನವಜಾತ ಶಿಶು ಸೇರಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ನೋಯ್ಡಾದಲ್ಲಿ ನಡೆದಿದೆ.
ನೋಯ್ಡಾದ ಸೆಕ್ಟರ್ 8ರ ಕೊಳೆಗೇರಿಯಲ್ಲಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡ ನವಜಾತ ಶಿಶು ಸೇರಿ ಇಬ್ಬರು ಮಕ್ಕಳನ್ನು ಕೂಡಲೇ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ವೇಳೆ ಸಾವನ್ನಪ್ಪಿದರು.
ನಾಲ್ವರು ಗಾಯಾಳುಗಳನ್ನು ದೆಹಲಿಯ ಸಫ್ದರ್ಗಂಜ್ಗೆ ಕಳುಹಿಸಲಾಗಿದೆ. ಸಿಲಿಂಡರ್ ಸ್ಪೋಟಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.