ಉತ್ತರ ಪ್ರದೇಶ, ಫೆ 12 (DaijiworldNews/HR): ನೋಯ್ಡಾ ಸೆಕ್ಟರ್ 8 ರಲ್ಲಿ ಅಡುಗೆ ಮನೆಯಲ್ಲಿ ಅಡುಗೆ ಅನಿಲ ಸ್ಫೋಟಗೊಂಡು 12 ದಿನದ ನವಜಾತ ಶಿಶು ಸೇರಿ ಇಬ್ಬರು ಮಕ್ಕಳು ಸಾವನ್ನಪ್ಪಿ, ಇತರರು ಗಾಯಗೊಂಡಿರುವ ಘಟನೆ ನಡೆದಿದೆ.
ಭಾನುವಾರ ಮುಂಜಾನೆ ಅಡುಗೆ ಅನಿಲ ಸ್ಫೋಟಗೊಂಡಿರುವ ಬಗ್ಗೆ ಅಗ್ನಿಶಾಮಕ ದಳದವರಿಗೆ ಮಾಹಿತಿ ಬಂದಿದ್ದು, ಬೆಂಕಿ ನಂದಿಸಿ, ರಕ್ಷಣಾ ಕಾರ್ಯಚರಣೆಯನ್ನು ಮಾಡಿದ್ದಾರೆ.
ಇನ್ನು ಬೆಂಕಿ ತಗುಲಿದ ಪರಿಣಾಮ 12 ದಿನದ ನವಜಾತ ಹೆಣ್ಣು ಶಿಶು , 12 ವರ್ಷದ ಬಾಲಕ ಸೇರಿ ಇಬ್ಬರು ಸುಟ್ಟ ಗಾಯಗಳಿಂದ ಮೃತಪಟ್ಟಿದ್ದು, 6 ಜನರಿಗೆ ಸುಟ್ಟ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.