ಶಿವಮೊಗ್ಗ, ಫೆ 12 (DaijiworldNews/HR): ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಈ ಕುರಿತು ಮಾತನಾಡಿದ ಯಡಿಯೂರಪ್ಪ, ಜ್ಞಾನಪೀಠ ಪಡೆದ ಮೊದಲ ಕನ್ನಡಿಗ ಕುವೆಂಪು ಆಗಿದ್ದು, ಅವರು ವಿಶ್ವ ಮಾನವ ಸಂದೇಶವನ್ನ ಸಾರಿದ್ದಾರೆ. ಹಾಗಾಗಿ ಕುವೆಂಪು ಹೆಸರಿಸಲು ನಿರ್ಣಯ ಮಾಡಿದ್ದು, ಸದನದಲ್ಲಿ ನಾನೇ ಮಂಡಿಸುತ್ತೇನೆ. ಅಧಿವೇಶನದಲ್ಲಿ ತೀರ್ಮಾನವನ್ನ ಸರ್ವಾನುಮತದಿಂದ ನಿರ್ಣಯಿಸಿ ಕೇಂದ್ರಕ್ಕ ಕಳುಹಿಸಲಾಗುತ್ತದೆ. ಬಿಎಸ್ ವೈ ಹೆಸರು ಮೊದಲೇ ಬೇಡ ಎಂದಿದ್ದೆ. ಹಾಗಾಗಿ ಕುವೆಂಪು ಹೆಸರು ಇಡಲು ನಿಶ್ಚಿಯಿಸಿರುವೆ ಎಂದರು.
ಇನ್ನು ನೈಟ್ ಲ್ಯಾಂಡಿಂಗ್ ಸೇರಿದಂತೆ ಎಲ್ಲಾ ವ್ಯವಸ್ಥೆ ಶಿವಮೊಗ್ಗ ಏರ್ಪೋರ್ಟ್ ಒಳಗೊಂಡಿದ್ದು, ಪ್ರಧಾನಿ ಮೋದಿಯವರು ಫೆಬ್ರವರಿ 27ರಂದು ಬರುವುದು ಖಚಿತವಾಗಿದ್ದು ಅವರೇ ಈ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿ, ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದ್ದಾರೆ.