ನವದೆಹಲಿ, ಫೆ 12 (DaijiworldNews/DB): ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಅವರು ಅಧ್ಯಕ್ಷ ಜಗದೀಪ್ ಧಂಕರ್ ಅವರತ್ತ ಬೆರಳು ತೋರಿಸುತ್ತಿರುವ ವೀಡಿಯೋ ವೈರಲ್ ಆಗಿದ್ದು, ಪ್ರತಿಪಕ್ಷ ಬಿಜೆಪಿ ಸಹಿತ ಹಲವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕ ಸೆಹ್ರಾವತ್ ಅವರು ಟ್ವೀಟರ್ನಲ್ಲಿ ವೀಡಿಯೋ ಹಂಚಿಕೊಂಡಿದ್ದು, ರಾಜ್ಯಸಭೆಯಲ್ಲಿ ಜಯಾ ಬಚ್ಚನ್ ಅವರ ವರ್ತನೆ ಖಂಡನೀಯ ಎಂದಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿಯೂ ವೀಡಿಯೋ ವೈರಲ್ ಆಗಿದ್ದು, ಅಧ್ಯಕ್ಷರು ಘನತೆವೆತ್ತ ವ್ಯಕ್ತಿಯಾಗಿರುತ್ತಾರೆ. ಗೌರವಯುತವಾದ ಸ್ಥಾನದಲ್ಲಿ ಕುಳಿತಿರುವ ಅವರ ಕಡೆಗೆ ಕೋಪದಿಂದ ಬೆರಳು ತೋರಿಸಿಕೊಂಡು ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ರಾಜ್ಯ ಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಸದನದಲ್ಲಿ ಜಯಾ ಬಚ್ಚನ್ ಪ್ರವೇಶಿಸಿದ್ದು, ಈ ವೇಳೆ ಉಪ ರಾಷ್ಟ್ರಪತಿ ಮತ್ತು ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧಂಕರ್ ಅವರನ್ನು ದಿಟ್ಟಿಸುತ್ತಾ ಬೆರಳು ತೋರಿಸಿದ್ದಾರೆ. ಆದರೆ ಜಯಾ ಬಚ್ಚನ್ ಇಂತಹ ವರ್ತನೆ ತೋರಿರುವುದು ಯಾಕೆ ಎಂಬುದು ತಿಳಿದು ಬಂದಿಲ್ಲ.