ನವದೆಹಲಿ, ಫೆ 12 (DaijiworldNews/DB): ದೇಶದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಮಕ್ಕಳು ಬೀದಿವಾಸಿಗಳಾಗಿದ್ದಾರೆ. ಇವರೆಲ್ಲರೂ ಕುಟುಂಬದೊಂದಿಗೆ ಬೀದಿ ಬದಿಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ ತಿಳಿಸಿದೆ.
ಲೋಕಸಭೆಗೆ ಈ ಕುರಿತು ಮಾಹಿತಿ ನೀಡಿರುವ ಸಚಿವ ಸ್ಮೃತಿ ಇರಾನಿ, ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳು ದೇಶದಲ್ಲಿ ಬೀದಿಬದಿಗಳಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿವೆ. ಬಾಲ್ ಸ್ವರಾಜ್ ಪೋರ್ಟಲ್ನಲ್ಲಿ ದತ್ತಾಂಶಗಳನ್ನು ಎಣಿಕೆ ಮಾಡಿ ಮುದ್ರಿಸಲಾಗಿದೆ ಎಂದರು.
19,546 ಮಂದಿ ಮಕ್ಕಳು ಬೀದಿಬದಿಯಲ್ಲಿ ವಾಸ ಮಾಡುತ್ತಿದ್ದಾರೆ. ಈ ಪೈಕಿ 10,041 ಮಕ್ಕಳು ಕುಟುಂಬ ಸಹಿತ ಬೀದಿಯಲ್ಲಿ ವಾಸಿಸುತ್ತಿದ್ದಾರೆ. 8,263 ಮಂದಿ ಮಕ್ಕಳು ಬೆಳಗ್ಗೆ ಬೀದಿಯಲ್ಲಿದ್ದು, ರಾತ್ರಿ ವೇಳೆ ಕೊಳಗೇರಿಗಳಿಗೆ ಕುಟುಂಬಗಳೊಂದಿಗೆ ತೆರಳುತ್ತವೆ. 882 ಮಕ್ಕಳು ಏಕಾಂಗಿಗಳಾಗಿ ಬೀದಿವಾಸಿಗಳಾಗಿದ್ದಾರೆ ಎಂದು ದತ್ತಾಂಶದಲ್ಲಿ ಉಲ್ಲೇಖಗೊಂಡಿದೆ.