ಬೆಂಗಳೂರು, ಫೆ 13 ( DaijiworldNews/MS):ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ "ಏರೋ ಇಂಡಿಯಾ ಶೋ - 2023" ದ 14ನೇ ಆವೃತ್ತಿ ಉದ್ಘಾಟನೆಗೊಂಡಿದ್ದು, ಯಲಹಂಕ ವಾಯುನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಏರೋ ಇಂಡಿಯಾ–2023 ದಲ್ಲಿ ಒಟ್ಟು 98 ದೇಶಗಳ 811 ಪ್ರದರ್ಶಕರು ಭಾಗವಹಿಸಲಿದ್ದಾರೆ. ₹75 ಸಾವಿರ ಕೋಟಿ ವಹಿವಾಟಿನ 251 ರಕ್ಷಣಾ ಉಪಕರಣಗಳು, ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ವಿವಿಧ ಕಂಪನಿಗಳು ಸಹಿ ಹಾಕುವ ನಿರೀಕ್ಷೆ ಇದೆ. ಫೆ.13ರಿಂದ 17ರವರೆಗೆ ಯಲಹಂಕ ವಾಯುನೆಲೆಯ ಒಟ್ಟು 35 ಸಾವಿರ ಚದರ ಮೀಟರ್ ಪ್ರದೇಶದಲ್ಲಿ ಐದು ದಿನಗಳ ಕಾಲ ಲೋಹದ ಹಕ್ಕಿಯ ಕಸರತ್ತು ನಡೆಯಲಿದೆ.
ಸರ್ಕಾರದ 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ದೃಷ್ಟಿಕೋನಕ್ಕೆ ಅನುಗುಣವಾಗಿ ಸ್ವದೇಶಿ ಉಪಕರಣಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಮತ್ತು ವಿದೇಶಿ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ರೂಪಿಸಲು ಈ ಶೋ ಸಹಾಯವಾಗಲಿದೆ.
ಪ್ರಧಾನಿ ಏರ್ ಶೋ 11.30 ರವರೆಗೆ ಶೋ ವೀಕ್ಷಿಸಲಿದ್ದಾರೆ.