ತಿರುವನಂತಪುರ, ಫೆ 13 (DaijiworldNews/HR): ಕೇರಳಕ್ಕಿಂತ ಕರ್ನಾಟಕ ಹೇಗೆ ಸುರಕ್ಷಿತ ಎಂಬುದನ್ನು ಅಮಿತ್ ಶಾ ಸ್ಪಷ್ಟಪಡಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ.
ಮಂಗಳೂರಿಗೆ ಭೇಟಿ ನೀಡಿದ್ದ ಶಾ, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ನಿಮ್ಮ ನೆರೆಯ ರಾಜ್ಯದ ಪರಿಸ್ಥಿತಿಯನ್ನೇ ಒಮ್ಮೆ ಗಮನಿಸಿ, ಅವಲೋಕಿಸಿ. ನಾನು ಹೆಚ್ಚಿಗೆ ಏನೂ ಹೇಳಬೇಕಾದ ಆವಶ್ಯಕತೆ ಇಲ್ಲ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇರಳ ಸಿಎಂ ಪಿಣರಾಯಿ, ಕೇರಳದಲ್ಲಿ ಅಭದ್ರತೆ ತೋರುವಂಥ ಯಾವ ಪರಿಸ್ಥಿತಿ ಎದುರಾಗಿದೆ? ಇಲ್ಲಿನ ಜನರು ಸಂವಿಧಾನದ ಮೇಲೆ ನಂಬಿಕೆ ಹೊಂದಿದ್ದಾರೆ. ನೆಮ್ಮದಿಯಾಗಿ ಜೀವಿಸುತ್ತಿದ್ದಾರೆ, ಅದೇ ಕರ್ನಾಟಕದಲ್ಲಿ ಈ ಪರಿಸ್ಥಿತಿ ಇದೆಯೇ? ಕರ್ನಾಟಕದಲ್ಲಿ ಕ್ರಿಶ್ಚಿಯನ್ನರು, ಅಲ್ಪಸಂಖ್ಯಾಕ ಸಮುದಾ ಯದವರು ಅನೇಕ ದಾಳಿಗಳನ್ನು ಎದುರಿಸುತ್ತಿದ್ದಾರೆ. ಆದರೆ ಕೇರಳದಲ್ಲಿ ಅಂತಹ ಕೋಮುದ್ವೇಷವೇ ಇಲ್ಲ ಎಂದು ಹೇಳಿದ್ದಾರೆ.