ನವದೆಹಲಿ, ಫೆ 13 (DaijiworldNews/HR): ಸುಪ್ರೀಂ ಕೋರ್ಟ್ನ ಹೊಸ ನ್ಯಾಯಾಧೀಶರಾಗಿ ನ್ಯಾಯಾಮೂರ್ತಿ ರಾಜೇಶ್ ಬಿಂದಾಲ್ ಹಾಗೂ ನ್ಯಾಯಮೂರ್ತಿ ಅರವಿಂದ್ ಕುಮಾರ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನ್ಯಾಯಮೂರ್ತಿ ಬಿಂದಾಲ್ ಅವರು ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿದ್ದು, ನ್ಯಾಯಮೂರ್ತಿ ಕುಮಾರ್ ಅವರು ಗುಜರಾತ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು.
ಇನ್ನು ಈ ಇಬ್ಬರು ನ್ಯಾಯಾಧೀಶರು ಪ್ರಮಾಣ ವಚನ ಸ್ವೀಕರಿಸಿದ ನಂತರ ಒಂಬತ್ತು ತಿಂಗಳ ಅಂತರದ ನಂತರ ಸುಪ್ರೀಂ ಕೋರ್ಟ್ ಭಾರತದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ 34 ನ್ಯಾಯಾಧೀಶರ ಸಂಪೂರ್ಣ ಬಲವನ್ನು ಸಾಧಿಸುತ್ತದೆ.