ನವದೆಹಲಿ, ಫೆ 13 (DaijiworldNews/HR): ಉತ್ತರ ದಿಲ್ಲಿ ಜಿಲ್ಲೆಯ ಹೊರ ವಲಯದ ಬವಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೂಲರ್ ಫ್ಯಾಕ್ಟರಿಯೊಂದರ ಲಿಫ್ಟ್ ಅಡಿ ಸಿಲುಕಿ 15 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತ ಬಾಲಕನನ್ನು ಲೋಕೇಶ್ ಎಂದು ಗುರುತಿಸಲಾಗಿದ್ದು, ಆತನ ತಾಯಿಯು ಆ ಫ್ಯಾಕ್ಟರಿಯಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಇನ್ನು ಬಾಲಕ ಆಟವಾಡುತ್ತಾ, ಲಿಫ್ಟ್ ಅಡಿಗೆ ಹೋಗಿದ್ದು, ಯಾರೋ ಲಿಫ್ಟ್ಗಾಗಿ ಗುಂಡಿ ಒತ್ತಿದಾಗ ಕೆಳಗೆ ಬಂದಿರುವ ಎಲಿವೇಟರ್ ಅಡಿಗೆ ಸಿಕ್ಕಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಈ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.