ನವದೆಹಲಿ, ಫೆ 13 (DaijiworldNews/HR): ಚೀನಾ, ಸಿಂಗಾಪುರ್, ಹಾಂಗ್ ಕಾಂಗ್, ಕೊರಿಯಾ, ಥೈಲ್ಯಾಂಡ್ ಮತ್ತು ಜಪಾನ್ನಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಪೂರ್ವ-ಬೋರ್ಡಿಂಗ್ ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನ ಕಡ್ಡಾಯಗೊಳಿಸಲಾಗಿತ್ತು. ಆದರೆ ಸೋಮವಾರದಿಂದ ನಿರ್ಬಂಧಗಳನ್ನ ತೆಗೆದುಹಾಕಲಾಗುವುದು ಎಂದು ಸರ್ಕಾರ ಘೋಷಿಸಿದೆ.
ಕೋವಿಡ್ ಪ್ರಕರಣಗಳು ವೇಗವಾಗಿ ಕಡಿಮೆಯಾಗುತ್ತಿರುವುದರಿಂದ, ಆರು ದೇಶಗಳಿಂದ ಅಥವಾ ಅಲ್ಲಿಂದ ಬರುವ ಪ್ರಯಾಣಿಕರಿಗೆ 'ಏರ್ ಫೆಸಿಲಿಟಿ' ಫಾರ್ಮ್ಗಳನ್ನು ಅಪ್ಲೋಡ್ ಮಾಡುವ ನಿಯಮವನ್ನ ಕೇಂದ್ರವು ತೆಗೆದುಹಾಕಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ನಾಗರಿಕ ವಿಮಾನಯಾನ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಅವರಿಗೆ ಪತ್ರ ಬರೆದಿದ್ದು, ಕೋವಿಡ್ -19 ಪ್ರಕರಣಗಳು ಕಡಿಮೆಯಾಗುತ್ತಿರುವ ಕಾರಣ ಆರು ದೇಶಗಳಿಂದ ಅಂತರರಾಷ್ಟ್ರೀಯ ಆಗಮನಕ್ಕಾಗಿ 'ವಿಮಾನ ಸೌಲಭ್ಯ'ದಲ್ಲಿ ನಿರ್ಗಮನ ಪೂರ್ವ ಕೋವಿಡ್ -19 ಪರೀಕ್ಷೆ ಮತ್ತು ಸ್ವಯಂ ಆರೋಗ್ಯ ಘೋಷಣೆಯ ಪ್ರಸ್ತುತ ಆದೇಶವನ್ನ ಬದಲಾಯಿಸಲಾಗಿದೆ ಎಂದು ತಿಳಿಸಿದ್ದಾರೆ.