ಅಸ್ಸಾಂ, ಫೆ 13 (DaijiworldNews/HR): ಅಸ್ಸಾಂನ ಪ್ರಸಿದ್ಧ ಮಹಿಳಾ ಯೂಟ್ಯೂಬರ್ ಗುವಾಹಟಿಯ ಬಾಮುನಿಮೈದಂ ಪ್ರದೇಶದ ಆಕೆಯ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಹಿಳೆಯನ್ನು ಪ್ರಿಯೋಲಿನಾ ನಾಥ್ ಎಂದು ಗುರುತಿಸಲಾಗಿದೆ.
ಇನ್ನು ಮಹಿಳೆಯ ದೇಹವು ಆಕೆಯ ನಿವಾಸದಲ್ಲಿ ಇಂದು ಪತ್ತೆಯಾಗಿದ್ದು, ಆಕೆಯ ಕುತ್ತಿಗೆಗೆ ಹಗ್ಗ ಬಿಗಿದಂತಿದ್ದು ದೇಹದ ಮೇಲೆ ಹಲವಾರು ಗಾಯದ ಗುರುತುಗಳಿವೆ. ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಅನುಮಾನವನ್ನು ಹುಟ್ಟುಹಾಕುತ್ತಿದೆ.
ಮೃತ ಯುವತಿ ಮೂರು ತಿಂಗಳ ಹಿಂದೆ ಮದುವೆಯಾಗಿದ್ದು ಪತಿ ಪಂಕಜ್ ನಾಥ್ ಅವರೊಂದಿಗೆ ಬಾಮುನಿಮೈದಮ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.