ಮುಂಬೈ, ಫೆ 14 (DaijiworldNews/HR): 20 ವರ್ಷಗಳಿಂದ ಹುಡುಕಾಟ ನಡೆಸುತ್ತಿದ್ದ ಛೋಟಾ ಶಕೀಲ್ ಬಣದ ಶಾರ್ಪ್ ಶೂಟರ್ ಮಾಹಿರ್ ಸಿದ್ದಿಖಿ, 5 ವರ್ಷಗಳ ಕಾಲ ಜೈಲಿನಲ್ಲೇ ಇದ್ದರೂ ಪೊಲೀಸರಿಗೆ ಗೊತ್ತಾಗದಿರುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.
ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ನ್ಯಾಯಾಲಯದ ನ್ಯಾಯಾಧೀಶರೇ ಇದನ್ನು ಅಚ್ಚರಿಯಿಂದ ಪ್ರಶ್ನಿಸಿದ್ದು, ಈ ಬಗ್ಗೆ ಅಭಿಪ್ರಾಯ ನೀಡಿದ ನ್ಯಾ.ಎ.ಎಂ.ಪಾಟೀಲ್, 5 ವರ್ಷ ಜೈಲಿನಲ್ಲೇ ಇದ್ದರೂ ಪೊಲೀಸರಿಗೆ ಗೊತ್ತಾಗದ್ದೇ ಇದ್ದದ್ದು ಹೇಗೆ? ಎಂದು ಕೇಳಿದ್ದಾರೆ.
ಇನ್ನು ಸಿದ್ದಿಖೀ 1999 ಜುಲೈನಲ್ಲಿ ವಾಹಿದ್ ಅಲಿ ಖಾನ್ನನ್ನು ಗುಂಡಿಟ್ಟು ಹತ್ಯೆ ಮಾಡಿ ತಪ್ಪಿಸಿಕೊಂಡಿದ್ದು, 2019ರಲ್ಲಿ ಸಾಕ್ಷ್ಯಸಮೇತ ಪೊಲೀಸರು ಸಿದ್ದಿಖೀಯನ್ನು ಬಂಧಿಸಿ ಆರೋಪಪಟ್ಟಿ ಸಲ್ಲಿಸಿದರು. ಆದರೆ ಇನ್ನೊಂದು ಪ್ರಕರಣದಲ್ಲಿ ಸಿದ್ದಿಖಿ ಸಿಐಡಿಯಿಂದ ಬಂಧನಕ್ಕೊಳಗಾಗಿ 2014ರಿಂದ 2019ರವರೆಗೆ ಜೈಲಿನಲ್ಲೇ ಇದ್ದ! ಇವನ್ನೆಲ್ಲ ಪರಿಗಣಿಸಿ ಸಿದ್ದಿಖೀಯನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ.