ಚೆನ್ನೈ, ಫೆ 14 (DaijiworldNews/DB): ಪ್ರೇಮಿಗಳ ದಿನಾಚರಣೆ ವಿರೋಧಿಸಿ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ನಾಯಿಗಳಿಗೆ ಅಣುಕು ವಿವಾಹ ಏರ್ಪಡಿಸಿದ ಪ್ರಸಂಗ ತಮಿಳುನಾಡಿನ ಶಿವಗಂಗಾದಲ್ಲಿ ನಡೆದಿದೆ.
ಹಿಂದೂ ಮುನ್ನಾನಿ ಸಂಘಟನೆಯ ಪದಾಧಿಕಾರಿಗಳು ಎರಡು ನಾಯಿಗಳಿಗೆ ಸೋಮವಾರ ಅಣುಕು ಮದುವೆ ಮಾಡಿಸಿದ್ದಾರೆ. ನಾಯಿಗಳಿಗೆ ವಸ್ತ್ರ, ಹಾರ ಹೊದಿಸಿ ಗಂಟು ಕಟ್ಟಿದ್ದಾರೆ. ನಾಯಿಗಳಿಗೆ ಮದುವೆಯಾಗಿದೆ ಎಂಬ ಸಂಕೇತವಾಗಿ ಗಂಟು ಕಟ್ಟಲಾಗಿದೆ ಎಂದು ಪದಾಧಿಕಾರಿಗಳು ಹೇಳಿದ್ದಾರೆ.
ಪ್ರೇಮಿಗಳ ದಿನ ಭಾರತೀಯ ಸಂಸ್ಕೃತಿಗೆ ವಿರುದ್ದವಾಗಿದೆ. ಅಲ್ಲದೆ ಈ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಕೆಲವರು ಅನುಚಿತ ವರ್ತನೆ ತೋರುತ್ತಿದ್ದಾರೆ. ಇದನ್ನು ವಿರೋಧಿಸಿ ನಾಯಿಗಳ ಅಣುಕು ಮದುವೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.