ನವದೆಹಲಿ, ಫೆ 14 (DaijiworldNews/MS): ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದೆಹಲಿ ಹಾಗೂ ಮುಂಬೈಯಲ್ಲಿರುವ ಬಿಬಿಸಿ ಕಚೇರಿಯಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
img src=https://daijiworld.ap-south-1.linodeobjects.com/Linode/img_tv247/ms-140223-bbc.jpg>
"ಕಚೇರಿ ಸಿಬ್ಬಂದಿಗಳ ಪೋನ್ ಜಪ್ತಿ ಮಾಡಿದ್ದು, ತೆರಿಗೆ ವಂಚನೆ ತನಿಖೆಯ ಭಾಗವಾಗಿ ಶೋಧ ನಡೆಸಲಾಗುತ್ತಿದೆ.ಕಂಪನಿಯ ವ್ಯವಹಾರ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಅದರ ಭಾರತೀಯ ವಿಭಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಲಾಖೆ ಪರಿಶೀಲಿಸುತ್ತಿದೆ "ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್ ಗಲಾಭೆ ಬಗ್ಗೆ ಸಾಕ್ಷ್ಯಚಿತ್ರ ಮಾಡಿದ್ದ ಬಿಬಿಸಿ ಕಚೇರಿ ಸಾಕ್ಷ್ಯಚಿತ್ರ ಪ್ರಸಾರ ಮಾಡದಂತೆ ನಿಷೇಧ ಕೇಂದ್ರ ಹೇರಿದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಕೇಂದ್ರ ವಿರುದ್ಧ "ಅಘೋಷಿತ ತುರ್ತುಸ್ಥಿತಿ" ಎಂದು ಕಿಡಿ ಕಾರಿದೆ. "ಮೊದಲು ಬಿಬಿಸಿ ಸಾಕ್ಷ್ಯಚಿತ್ರ ಬಿಡುಗಡೆಯಾಯಿತು, ಬಳಿಕ ಅದನ್ನು ನಿಷೇಧಿಸಲಾಯಿತು. ಇದೀಗ ಬಿಬಿಸಿ ಮೇಲೆ ಐಟಿ ದಾಳಿ ನಡೆಸಿದೆ. ಅಘೋಷಿತ ತುರ್ತು ಪರಿಸ್ಥಿತಿ " ಎಂದು ಹೇಳಿದೆ.