ಮುಂಬೈ,ಮಾ 15 (MSP): ಛತ್ರಪತಿ ಶಿವಾಜಿ ಮಹಾರಾಜ ರೈಲು ನಿಲ್ದಾಣದ ಸನಿಹದಲ್ಲಿರುವ ಪಾದಚಾರಿ ಮೇಲ್ಸೇತುವೆ ಕುಸಿದಿದ್ದು, ಇದರ ಪರಿಣಾಮ 6 ಜನ ಮೃತಪಟ್ಟಿದ್ದು 36 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾ 14 ರ ಗುರುವಾರ ಸಂಜೆ, 7.30ರ ಹೊತ್ತಿಗೆ ಸಂಜೆ ಜನಸಾಂದ್ರತೆ ಹೆಚ್ಚಾಗಿರುವಾಗ ಮೇಲ್ಸೇತುವೆ ಕುಸಿದಿದ್ದು, ಇದರ ಮೇಲೆ ನಡೆಯುತ್ತಿದ್ದ ಮತ್ತು ಕೆಳಗೆ ನಡೆದಾಡುತ್ತಿದ್ದವರು ಗಾಯಗೊಂಡಿದ್ದಾರೆ.
1984ರಲ್ಲಿ ನಿರ್ಮಾಣ ಮಾಡಲಾಗಿದ್ದ ಈ ಮೇಲ್ಸೇತುವೆ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ಫ್ಲಾಟ್ ಫಾರಂ1 ಉತ್ತರದ ಕೊನೆಯ ಭಾಗ ಹಾಗೂ ಟೈಮ್ಸ್ ಆಫ್ ಇಂಡಿಯಾ ಕಟ್ಟಡದ ಬಳಿಯ ಬಿಟಿ ಲೇನ್ ನ್ನು ಸಂಪರ್ಕಿಸುತ್ತಿತ್ತು.