ಚಿಕ್ಕಮಗಳೂರು, ಫೆ 14 (DaijiworldNews/HR): ಬಿಲ್ ಕ್ಲಿಂಟನ್ ಫೌಂಡೇಶನ್ ನೀಡುವ ಗ್ಲೋಬಲ್ ಇನಿಶಿಯೇಟಿವ್ ಅವಾರ್ಡ್ನ ವಿದ್ಯಾರ್ಥಿವೇತನಕ್ಕೆ ಎನ್ಎಸ್ಡಬ್ಲ್ಯುಎಸ್ (ನಿಕೋಲಸ್ ಸೋಶಿಯಲ್ ವೆಲ್ಫೇರ್ ಸೊಸೈಟಿ) ಸಹ-ಸಂಸ್ಥಾಪಕ ಶಾನ್ ಡಿಸೋಜಾ ಆಯ್ಕೆಯಾಗಿದ್ದಾರೆ.
ಇದೇ ಮೊದಲ ಬಾರಿಗೆ ಕೊಂಕಣಿ ಭಾಷಿಕ ಯುವಕನೊಬ್ಬ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಶಾನ್ ಅವರ ಅಜ್ಜ ದಿವಂಗತ ನಿಕೋಲಸ್ ಡಿಸೋಜಾ ಚಿಕ್ಕಮಗಳೂರು ನಗರದ ಮೊದಲ ಅಧ್ಯಕ್ಷರಾಗಿದ್ದರು. ಶಾನ್ ಚಿಕ್ಕಮಗಳೂರಿನ ಬೆನೆಡಿಕ್ಟ್ ಸ್ಟೀವನ್ಸನ್ ಡಿಸೋಜಾ ಮತ್ತು ಅನ್ನಾ ಡಯಾನಾ ಡಿಸೋಜಾ ದಂಪತಿಯ ಪುತ್ರ.
ಕರ್ನಾಟಕ, ತೆಲಂಗಾಣ ಮತ್ತು ಆಂಧ್ರದ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಮಾನಸಿಕ ಆರೋಗ್ಯ ಯೋಗಕ್ಷೇಮದ ಕುರಿತು ಅವರ ಬದ್ಧತೆಯ (CTA) ಕಾರ್ಯನೀತಿಯ ಅನುಷ್ಠಾನದಲ್ಲಿ ಭಾಗವಹಿಸಲು ಆಯ್ಕೆಯಾದ ಜಗತ್ತಿನಾದ್ಯಂತ 800 ಭಾಗವಹಿಸುವವರಲ್ಲಿ ಶಾನ್ ಒಬ್ಬರು.
ಇನ್ನು ಶಾನ್ ಡಿಸೋಜಾ ಅವರ ಯೋಜನೆಯು ಮಾರ್ಚ್ 31 ರಂದು ಕಿಂಗ್ಸ್ ಗ್ಲೋಬಲ್ ಡೇ ಆಫ್ ಸೇವೆಯ ದಿನದಂದು ಪ್ರಾರಂಭವಾಗುತ್ತದೆ ಮತ್ತು ಕಿಂಗ್ಸ್ ಅಲುಮ್ನಿ ಹೈದರಾಬಾದ್ ಮತ್ತು ಖಜಾಂಚಿ ನೇತೃತ್ವದಲ್ಲಿ ನಡೆಯಲಿದೆ.