ನವದೆಹಲಿ, ಫೆ 14 (DaijiworldNews/DB): ಆನ್ಲೈನ್ನಲ್ಲಿ 12 ಸಾವಿರ ರೂ. ಮೌಲ್ಯದ ವಸ್ತುವೊಂದನ್ನು ಆರ್ಡರ್ ಮಾಡಿದ ಮಹಿಳೆಯೊಬ್ಬರಿಗೆ ಚಾಟ್ ಮಸಾಲಾ ಬಾಕ್ಸ್ಗಳು ಡೆಲಿವರಿ ಆದ ಪ್ರಸಂಗ ನಡೆದಿದೆ.
ಈ ಬಗ್ಗೆ ಆನ್ಲೈನ್ ಶಾಪಿಂಗ್ ತಾಣ ಅಮೆಜಾನ್ನ್ನು ಟ್ವಿಟರ್ನಲ್ಲಿ ಟ್ಯಾಗ್ ಮಾಡಿ ಮಹಿಳೆ ಪ್ರಶ್ನಿಸಿದ್ದಾರೆ. ಮಹಿಳೆ ಹೇಳಿದ ಪ್ರಕಾರ, ಆಕೆಯ ತಾಯಿ 12 ಸಾವಿರ ರೂ. ಮೌಲ್ಯದ ಓರಲ್ ಬಿ ಎಲೆಕ್ಟ್ರಿಕ್ ಬ್ರಷ್ನ್ನು ಆರ್ಡರ್ ಮಾಡಿದ್ದರು. ಆದರೆ ಡೆಲಿವರಿ ಆದ ಬಳಿಕ ಬಾಕ್ಸ್ ಬಿಚ್ಚಿ ನೋಡುವಾಗ ಆರ್ಡರ್ ಮಾಡಿದ ವಸ್ತುವಿನ ಬದಲಾಗಿ 4 ಎಂಡಿಎಚ್ ಚಾಟ್ ಮಸಾಲಾ ಬಾಕ್ಸ್ ಅವರ ಕೈ ಸೇರಿದೆ.
ಈ ಆರ್ಡ್ರ್ ಡೆಲಿವರಿಯಾಗುವಾಗ ಬಂದಿರುವ ಮಸಾಲಾ ಬಾಕ್ಸ್ಗಳನ್ನು ಮಹಿಳೆ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಗ್ರಾಹಕರಿಗೆ ಮೋಸ ಮಾಡುವ ಇಂತಹ ಕಂಪೆನಿಗಳನ್ನು ಅಮೆಜಾನ್ನಿಂದ ಯಾಕೆ ಕೈ ಬಿಡಬಾರದು ಎಂದೂ ಪ್ರಶ್ನಿಸಿದ್ದಾರೆ.
ಇನ್ನು ಹೆಚ್ಚು ಬೆಲೆಯ ವಸ್ತುಗಳನ್ನು ಮೂರನೇ ಪಾರ್ಟಿಯಿಂದ ಖರೀದಿಸುವ ಮೊದಲು ಆ ಕಂಪೆನಿ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಇಲ್ಲವಾದರೆ ಮೋಸ ನಿಶ್ಚಿತ ಎಂದು ಕೆಲವರು ಸಲಹೆ ಮಾಡಿದ್ದಾರೆ.