ಬೆಂಗಳೂರು, ಫೆ 15 (DaijiworldNews/MS): ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟ ಸೇರಿದಂತೆ ಎರಡು ಪ್ರತ್ಯೇಕ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಫೆ.15 ರಂದು ಬೆಳಿಗ್ಗೆ ಕರ್ನಾಟಕ, ಕೇರಳ, ತಮಿಳುನಾಡು ಸೇರಿ 60 ಸ್ಥಳಗಳಲ್ಲಿ ಶಂಕಿತ ಐಎಸ್ಐಎಸ್ ಬೆಂಬಲಿಗರಿಗಾಗಿ ಶೋಧಕಾರ್ಯಾಚರಣೆ ನಡೆಸಿದೆ.
ಭಯೋತ್ಪಾದನಾ ವಿರೋಧಿ ತನಿಖಾ ಸಂಸ್ಥೆ ನೀಡಿದ ಮಾಹಿತಿಯಂತೆ ಕಳೆದ ವರ್ಷ ತಮಿಳುನಾಡಿನ ಕೊಯಮತ್ತೂರು ಮತ್ತು ಕರ್ನಾಟಕದ ಮಂಗಳೂರಿನಲ್ಲಿ ಕ್ರಮವಾಗಿ ಅಕ್ಟೋಬರ್ 23, 2022 ಮತ್ತು ನವೆಂಬರ್ 19, 2022 ರಂದು ಸಂಭವಿಸಿದ ಸ್ಫೋಟಗಳಿಗೆ ಸಂಬಂಧಿಸಿದಂತೆ ಶೋಧಗಳನ್ನು ನಡೆಸಲಾಗುತ್ತಿದೆ.
ವಿಡಿಯೋಗಳ ಮೂಲಕ ಭಯೋತ್ಪಾದನೆಯತ್ತ ಒಲವು ಬೆಳೆಸಿಕೊಂಡಿದ್ದವರಿಗಾಗಿ ಎನ್ಐಎ ಹುಡುಕಾಟ ಪ್ರಾರಂಭಿಸಿದೆ.ಕರ್ನಾಟಕದಲ್ಲೂ ಎನ್ಐಎ 45 ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಶೋಧಕಾರ್ಯಾಚರಣೆ ಕೈಗೊಂಡಿದೆ ಎಂದು ವರದಿಯಾಗಿದೆ.