ಬೆಂಗಳೂರು, ಫೆ 15 (DaijiworldNews/MS): ಬಜೆಟ್ ಅಧಿವೇಶನ ಮುಗಿದ ಮೇಲೆ ನೀತಿ ಸಂಹಿತೆ ಜಾರಿಗೊಳ್ಳುತ್ತದೆ. ಹೀಗಾಗಿ, ರಾಜ್ಯ ಸರ್ಕಾರ ಕೊನೆ ತಿಂಗಳು ಎಂದು ತರಾತುರಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ಸಿಗರು ದಾಖಲೆ ಇಟ್ಟುಕೊಂಡು ದೂರು ನೀಡಲಿ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ಆಧಾರವಿಲ್ಲದೇ ಕಾಂಗ್ರೆಸ್ ನಾಯಕರು ಆರೋಪ ಮಾಡ್ತಿದ್ದಾರೆ. ಇದು ಸತ್ಯವಾಗಿದ್ದರೆ ವಿಧಾನಸಭೆಯಲ್ಲಿ ಯಾಕೆ ಈ ಕುರಿತು ಮಾತನಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ
ವಿಧಾನಸಭೆಯಲ್ಲಿ ಮಾತನಾಡದೆ ಈಗ ಹೊರಗಡೆ ಹೋಗಿ ಆರೋಪ ಮಾಡ್ತಿದ್ದಾರೆ ಅಷ್ಟೇ. ಒಂದು ವೇಳೆ ಕಾಂಗ್ರೆಸ್ಸಿಗರು ಆರೋಪ ನಿಜವಾಗಿದ್ದರೆ ದಾಖಲೆ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ದೂರು ನೀಡಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವ ಹೇಳಿಕೆ ಸರಿಯಲ್ಲ ಎಂದು ಕಾಂಗ್ರೆಸ್ ಆರೋಪಕ್ಕೆ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.