ಬೆಂಗಳೂರು, ಫೆ 16 (DaijiworldNews/MS): ಬಿಜೆಪಿ ನಾಯಕರಾಗಿರುವ ಡಾ ಸಿಎನ್ ಅಶ್ವಥ್ ನಾರಾಯಣ ಮತ್ತು ನಳಿನ್ ಕುಮಾರ್ ಕಟೀಲ್ ಅವರು ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯನವರನ್ನು ಹೊಡೆದು ಹಾಕಿ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ಕೇವಲ ಕಾಂಗ್ರೆಸ್ ಪಕ್ಷವನ್ನು ಮಾತ್ರವಲ್ಲ ಜೆಡಿಎಸ್ ನ್ನು ಕೆರಳಿಸಿದೆ.
ಇದೇ ವಿಚಾರವಾಗಿ ನಗರದಲ್ಲಿ ಮಾಧ್ಯಮಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿಅವರು, ಬಿಜೆಪಿ ನಾಯಕರ ಮಾತು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು
ಆರೋಪಿಸಿದ್ದಾರೆ.
ಆವೇಶದಲ್ಲಿ ಮಾತಾಡುವಾಗ ಅವರ ಹೃದಯದಲ್ಲಿರೋದು ಹೊರಗೆ ಬರುತ್ತದೆ, ದ್ವೇಷ ಮತ್ತು ಹಿಂಸೆಯೇ ಅವರ ಹಿಡನ್ ಅಜೆಂಡ, ಜನರ ಮುಂದೆ ಮಾತ್ರ ಮುಖವಾಡ ಧರಿಸಿ ಬರುತ್ತಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಹೊಡಿ ಬಡಿ ಎಂಬುದು ಬಿಜೆಪಿಯವರ ಸಂಸ್ಕೃತಿ. ಸಿದ್ದರಾಮಯ್ಯರನ್ನು ಮುಗಿಸಿ ಅಂದರೇ ಏನು ಅರ್ಥ ಇದು. ಟಿಪ್ಪು ಸುಲ್ತಾನ್ ರೀತಿ ನನ್ನನ್ನು ಮುಗಿಸಿ ಅಂದರೆ ಇದರರ್ಥ ಏನು ಈ ಹಿಂದೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಇನ್ನು ಈ ಹೇಳಿಕೆ ವಿವಾದವಾಗುತ್ತಿದ್ದಂತೆ ಅಶ್ವಥ್ ನಾರಾಯಣ ಕ್ಷಮೆ ಯಾಚಿಸಿದ್ದರು.