ಪಣಜಿ, ಫೆ 16 (DaijiworldNews/HR): ಒಂದು ಕಾಲದಲ್ಲಿ ಸ್ವರ್ಗವೆಂದೇ ಬಿಂಬಿತವಾಗಿದ್ದ ಗೋವಾ ಈಗ ಕ್ರಿಮಿನಲ್ ಲೋಕವಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕರು, ಡ್ರಗ್ಸ್, ವೇಶ್ಯಾವಾಟಿಕೆ, ಕೊಲೆ, ಕಪ್ಪು ಹಣ ಮತ್ತು ಜೂಜಾಟ ಎಲ್ಲವೂ ಗೋವಾದಲ್ಲಿ ತೊಡಗಿದ್ದು, 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ವಿಶ್ವದಲ್ಲಿ ಗೋವಾದ ಹೆಸರು ಹಾಳಾಗಿದೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಗೋವಾ ಕಾಂಗ್ರೆಸ್ ಅಧ್ಯಕ್ಷ ಸಾವಿಯೋ ಡಿ ಸಿಲ್ವಾ, ಮಹಿಳಾ ಅಧ್ಯಕ್ಷೆ ಬಿನಾ ನಾಯಕ್, ಕುಡ್ತರಿ ನಾಯಕ ಮೊರೆನ್ ರಿಬೇರೊ ಮತ್ತು ಕ್ಯಾಪ್ಟನ್ ವಿರಿಯಾಟೊ ಫೆನಾರ್ಂಡಿಸ್ ಉಪಸ್ಥಿತರಿದ್ದರು.