ನವದೆಹಲಿ, ಫೆ 17 (DaijiworldNews/HR): ಕೆಲವು ವಿದೇಶಿ ಶಕ್ತಿಗಳು ನಮ್ಮ ಪ್ರಜಾಪ್ರಭುತ್ವವನ್ನು ಗುರಿಯಾಗಿಸಿಕೊಂಡು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.
ಅದಾನಿ ವಿಚಾರದಲ್ಲಿ ಅಮೆರಿಕ ಮೂಲದ ಬಿಲಿಯನೇರ್ ಹೂಡಿಕೆದಾರ ಜಾರ್ಜ್ ಸೊರೊಸ್ ನೀಡಿದ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿರುವ ಇರಾನಿ, ಜಾರ್ಜ್ ಸೊರೊಸ್ ಅವರು ತಮ್ಮ ಅಗತ್ಯಗಳಿಗೆ ಹೊಂದಿಕೊಳ್ಳುವ ಸರ್ಕಾರವನ್ನು ಬಯಸುತ್ತಾರೆ ಎಂಬುದು ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ಪ್ರಧಾನಿ ಮೋದಿಯಂತಹ ನಾಯಕರನ್ನು ಗುರಿಯಾಗಿಸಲು ಅವರು ಶತಕೋಟಿ ಡಾಲರ್ಗೂ ಹೆಚ್ಚು ಹಣವನ್ನು ಘೋಷಿಸಿದ್ದಾರೆ ಎಂಬುದು ಗಮನಾರ್ಹವಾಗಿದೆ ಎಂದರು.
ಇನ್ನು ಜಾರ್ಜ್ ಸೊರೊಸ್ಗೆ ವಿಧೇಯತೆಯನ್ನು ತೋರುವವರಿಗೆ ಭಾರತವು ಮೊದಲು ಸಾಮ್ರಾಜ್ಯಶಾಹಿ ವಿನ್ಯಾಸವನ್ನು ಸೋಲಿಸಿದ್ದು, ಭಾರತದಲ್ಲಿ ಪ್ರಜಾಪ್ರಭುತ್ವ ಚಾಲ್ತಿಯಲ್ಲಿದೆ. ಅದು ಮುಂದುವರಿಯುತ್ತದೆ. ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ವಿನ್ಯಾಸಗಳನ್ನು ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತವು ಎದುರಿಸಲಿದೆ ಎಂದು ಹೇಳಿದ್ದಾರೆ.