ನವದೆಹಲಿ, ಫೆ 18 (DaijiworldNews/HR): ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಸಿಸೋಡಿಯಾ, ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ತಡೆಯಲು ಸಿಬಿಐ ಬಯಸುತ್ತಿದೆ. ಸಿಬಿಐ ಭಾನುವಾರ ನನಗೆ ಮತ್ತೆ ಸಮನ್ಸ್ ನೀಡಿದ್ದು, ಅವರು ನನ್ನ ವಿರುದ್ಧ ಸಿಬಿಐ ಮತ್ತು ಇಡಿಯನ್ನು ಬಿಟ್ಟಿದ್ದಾರೆ ಎಂದರು.
ಇನ್ನು ನಾನು ದೆಹಲಿಯಲ್ಲಿ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ಮಾಡಿದ್ದೇನೆ. ಅವರು ಅದನ್ನು ನಿಲ್ಲಿಸಲು ಬಯಸುತ್ತಾರೆ. ಆದರೆ ಅವರ ತನಿಖೆಗೆ ನಾನು ಯಾವಾಗಲೂ ಬೆಂಬಲ ನೀಡಿದ್ದೇನೆ ಮತ್ತು ನೀಡುತ್ತೇನೆ ಎಂದು ಹೇಳಿದ್ದಾರೆ.