ನವದೆಹಲಿ, ಫೆ 19 (DaijiworldNes/HR): ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ಫೆ.17 ರಂದು ಚುನಾವಣಾ ಆಯೋಗವು (EC) ನಿಜವಾದ ಶಿವಸೇನೆ ಎಂದು ಘೋಷಿಸಿ ಅದಕ್ಕೆ 'ಬಿಲ್ಲು ಮತ್ತು ಬಾಣ' ಚಿಹ್ನೆಯನ್ನು ಹಂಚಿಕೆ ಮಾಡಿದೆ ಆದೇಶಿಸಿದೆ. ಇದರ ಬೆನ್ನಲ್ಲೆ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದ್ದು, ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡುವಂತೆ ಉದ್ಧವ್ ಅವರ ಗುಂಪು ನಾಳೆ ಒತ್ತಾಯಿಸಲಿದೆ.
ಚುನಾವಣಾ ಆಯೋಗದ ಆದೇಶವು ಅಸಮಂಜಸವಾಗಿದ್ದು, ಶಿಂಧೆ ಗುಂಪು ಸಾಂಸ್ಥಿಕ ಭಾಗದಲ್ಲಿ ದುರ್ಬಲವಾಗಿರುವುದರಿಂದ ಉದ್ದೇಶಪೂರ್ವಕವಾಗಿ ಚುನಾವಣಾ ಸಂಸ್ಥೆಯು ಪಕ್ಷದ ಸಂವಿಧಾನವನ್ನು ಪ್ರಜಾಪ್ರಭುತ್ವ ವಿರೋಧಿ, ಬಹುಮತವನ್ನು ನಿರ್ಧರಿಸಲು ಅದನ್ನು ಬದಿಗಿಟ್ಟಿದೆ ಎಂದು ಉದ್ಧವ್ ಬಣ ಹೇಳಿದೆ.
ಇನ್ನು ಚುನಾವಣಾ ಆಯೋಗವು ಚುನಾಯಿತ ಅಭ್ಯರ್ಥಿಗಳು (ಸಂಸದರು ಮತ್ತು ಶಾಸಕರು) ತೆಗೆದುಕೊಳ್ಳುವ ಮತಗಳ ಮೇಲೆ ಮಾತ್ರ ಅವಲಂಬಿತವಾಗಿದೆ ಎಂದಿದೆ.