ಲಖನೌ, ಫೆ 19 (DaijiworldNews/DB): ಬೀದಿ ನಾಯಿಗಳ ದಾಳಿಗೆ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಲಖನೌನಲ್ಲಿ ಶನಿವಾರ ಸಂಜೆ ನಡೆದಿದೆ.
ವಿಕಾಸ್ ಎಂಬುವರ ಏಳು ವರ್ಷದ ಪುತ್ರ ಸಾವನ್ನಪ್ಪಿದ ಬಾಲಕ. ಈತ ತನ್ನ ಮನೆ ಬಳಿ ಆಟದಲ್ಲಿ ನಿರತನಾಗಿದ್ದ ವೇಳೆ ಏಕಾಏಕಿ ಬೀದಿನಾಯಿಗಳು ಬಾಲಕನ ಮೇಲೆ ದಾಳಿ ನಡೆಸಿವೆ. ನಾಯಿಗಳ ದಾಳಿಯಿಂದಾಗಿ ಬಾಲಕ ಕಿರುಚಿಕೊಂಡಿದ್ದಾನೆ. ಕೂಡಲೇ ಗ್ರಾಮಸ್ಥರು ಓಡಿ ಬಂದು ನಾಯಿಗಳಿಂದ ಬಾಲಕನನ್ನು ಬಿಡಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಬೀದಿನಾಯಿಗಳ ದಾಳಿಗೊಳಗಾಗಿ ಹಲವರು ಸಾವನ್ನಪ್ಪಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ನಡೆಯುತ್ತಿವೆ.