ಗೌಹಾಟಿ, ಫೆ 20 (DaijiworldNews/MS): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಶ್ರದ್ಧಾ ಕೊಲೆ ರೀತಿ ಗೌಹಾಟಿಯಲ್ಲಿ ಪತಿ ಮತ್ತು ಅತ್ತೆಯನ್ನು ಕೊಂದು ಫ್ರಿಡ್ಜ್ನಲ್ಲಿಟ್ಟಿದ್ದ ಭಯಾನಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಬಂದನಾ ಕಲಿಟಾ
ಆರೋಪಿ ಬಂದನಾ ಕಲಿಟಾ, ಪತಿ ಅಮರ್ ಜ್ಯೋತಿ ಡೇ ಮತ್ತು ಅತ್ತೆ ಶಂಕರಿಯನ್ನು ಪ್ರಿಯಕರನ ಜತೆ ಸೇರಿ 2022ರ ಆ.17ರಂದು ಹತ್ಯೆ ಮಾಡಿದ್ದು 6 ತಿಂಗಳ ಬಳಿಕ ಇದನ್ನು ಪೊಲೀಸರು ಭೇದಿಸಿದ್ದಾರೆ.
ತನ್ನ ಪ್ರೇಮಿ ಮತ್ತು ಸ್ನೇಹಿತನ ಸಹಾಯದಿಂದ ಪತಿ ಅಮರಜ್ಯೋತಿ ಡೇ ಮತ್ತು ಅತ್ತೆ ಶಂಕರಿ ಡೇ ಅವರನ್ನು ಕೊಲೆ ಮಾಡಿದ ನಂತರ, ಆಕೆ ಸತ್ತ ಪತಿ ಮತ್ತು ಅತ್ತೆಯ ಶವವನ್ನು ಪೀಸ್ ಮಾಡಿ ಫ್ರಿಡ್ಜ್ನಲ್ಲಿ ಇಟ್ಟು ಬಳಿಕ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ರೆಫ್ರಿಜರೇಟರ್ನಿಂದ ದೇಹದ ಭಾಗಗಳನ್ನು ತೆಗೆದುಕೊಂಡು ಆಗಸ್ಟ್ 21, 2022 ರಂದು ಮೇಘಾಲಯದ ದೌಕಿಯಲ್ಲಿ ವಿಲೇವಾರಿ ಮಾಡಿದ್ದೇನೆ ಎಂದು ಕಲಿತಾ ತಪ್ಪೊಪ್ಪಿಕೊಂಡಿದ್ದಾಳೆ.