ನವದೆಹಲಿ, ಫೆ 21 (DaijiworldNews/MS): ಆಪರೇಷನ್ ದೋಸ್ತ್ ಮೂಲಕ ಟರ್ಕಿ ಕಾರ್ಯಾಚರಣೆಗೆ ತೆರಳಿದ ಭಾರತೀಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಸ್ವದೇಶಕ್ಕೆ ಮರಳಿದ್ದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಟರ್ಕಿಗೆ ಕಾಲಿಡುತ್ತಿದ್ದಂತೆ ಅಲ್ಲಿ ಕೇವಲ ಸವಾಲುಗಳೇ ಎದುರಾದವು. -೫ ಡಿಗ್ರಿಯಲ್ಲೂ ತಾಪಮಾನದಲ್ಲೂ ರಕ್ಷಣಾ ಕಾರ್ಯ ಒಂದಷ್ಟು ಜೀವಗಳನ್ನು ಉಳಿಸಿದ ತೃಪ್ತಿ ನಮಗಿದೆ. ಅಲ್ಲಿ ತಿನ್ನಲು ಸರಿಯಾದ ಆಹಾರವಿಲ್ಲ, ಸಸ್ಯಾಹಾರ ಇಲ್ಲವೇ ಇಲ್ಲ ಸ್ನಾನ ಮಾಡಲು ನೀರಿಲ್ಲ, ೧೦ ದಿನವೂ ನಾವು ಸ್ನಾನ ಮಾಡದೇ ಕಳೆದಿದ್ದು ಇವೆಲ್ಲದರ ನಡುವೆ ಕೆಲಸ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಅಲ್ಲಿ ಜನ ಅಪಾರ ಪ್ರೀತಿ ತೋರಿದರು ಎಂದು ಹೇಳಿದ್ದಾರೆ.
ವಿದೇಶಿ ವಿಪತ್ತು ಯುದ್ಧ ಕಾರ್ಯಾಚರಣೆಗೆ ಮೊದಲ ಬಾರಿಗೆ ಕಳುಹಿಸಲಾದ ಐವರು ಮಹಿಳಾ ರಕ್ಷಕರಲ್ಲಿ ಸುಷ್ಮಾ ಯಾದವ್ (32) ತಮ್ಮ 18 ತಿಂಗಳ ಅವಳಿ ಮಕ್ಕಳನ್ನು ಬಿಟ್ಟು ಟರ್ಕಿಗೆ ಹೋಗಿದ್ದರು. ನಾನು ನನ್ನ ಅವಳಿ ಮಕ್ಕಳನ್ನು ನನ್ನ ಅತ್ತೆಯ ಬಳಿ ಬಿಟ್ಟು ಹೋಗಿದ್ದೆ ಮತ್ತು ನಾನು ಅವರನ್ನು ಇಷ್ಟು ದಿನ ಬಿಟ್ಟು ಹೋಗಿದ್ದು ಇದೇ ಮೊದಲು ಎಂದು ಹೇಳಿದ್ದಾರೆ.
ರಾತ್ರೋ ರಾತ್ರಿ 140 ಪಾಸ್ಪೋರ್ಟ್ಗಳನ್ನು ಸಿದ್ಧಪಡಿಸಲು ಅಧಿಕಾರಿಗಳು ಸಾವಿರಾರು ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದರು. ಕೋಲ್ಕತ್ತಾ ಮತ್ತು ವಾರಣಾಸಿಯಲ್ಲಿರುವ ಎನ್ಡಿಆರ್ಎಫ್ ತಂಡಗಳಿಂದ ನೂರಾರು ಪಾಸ್ಪೋರ್ಟ್ಗಳನ್ನು ತಯಾರಿಸಲು ದಾಖಲೆಗಳನ್ನು ಫ್ಯಾಕ್ಸ್ ಮತ್ತು ಇಮೇಲ್ ಮೂಲಕ ಕಳುಹಿಸಲಾಗಿತ್ತು ಎನ್ನುವುದು ವಿಶೇಷ