ನವದೆಹಲಿ, ಫೆ 22 (DaijiworldNews/MS): ಟರ್ಕಿ ಹಾಗೂ ಸಿರಿಯಾದಲ್ಲಿ ನಡೆದ ಭೀಕರ ಭೂಕಂಪ ನೆನಪು ಇನ್ನು ಮಾಸದಿರುವಾಗ ನೇಪಾಳದಲ್ಲಿ ಇಂದು ಮದ್ಯಾಹ್ನ 1.45ರ ವೇಳೆಗೆ ಭೂಮಿ ಕಂಪಿಸಿದೆ.
ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ದಾಖಲಾಗಿದ್ದು ಈ ಭೂಕಂಪದ ತೀವ್ರತೆಗೆ ದೆಹಲಿ ಸೇರಿ ಉತ್ತರ ಭಾರತದ ಹಲವೆಡೆಯೂ ಭೂಮಿ ಕಂಪಿಸಿದ ಅನುಭವವಾಗಿದೆ.
ನೇಪಾಳದ ಜುಮ್ಲಾದಿಂದ 69 ಕಿ.ಮೀ ದೂರದಲ್ಲಿ, 10 ಕಿ.ಮೀ ಆಳದಲ್ಲಿ ಭೂಕಂಪವಾಗಿರುವುದನ್ನು ನೇಪಾಳದ ಭೂಕಂಪ ಪರೀಕ್ಷಣಾ ಮತ್ತು ಸಂಶೋಧನಾ ಕೇಂದ್ರ ಖಚಿತಪಡಿಸಿದೆ.ನೇಪಾಳದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಿವೆ. ಇದಕ್ಕೂ ಮುನ್ನ ಜನವರಿ 24 ರಂದು ನೇಪಾಳದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿತ್ತು.
ಕೆಲ ದಿನಗಳ ಹಿಂದೆಯಷ್ಟೇ ಹಲವು ತಜ್ಙರು ಭಾರತದಲ್ಲೂ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿರುವಾಗಲೇ ಹಿಮಾಲಯದ ತಪ್ಪಲ ಪ್ರದೇಶಗಳಲ್ಲಿ ಈ ಭೂಕಂಪ ಸಂಭವಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.