ತೆಲಂಗಾಣ, ಫೆ 23 (DaijiworldNews/HR): ಪೋಲೀಸರ ಕಸ್ಟಡಿ ಚಿತ್ರಹಿಂಸೆಯಿಂದಾಗಿ 36 ವರ್ಷದ ದೈನಂದಿನ ಕೂಲಿ ಕಾರ್ಮಿಕ ಖದೀರ್ ಖಾನ್ ಎಂಬ ವ್ಯಕ್ತಿಸಾವನ್ನಪ್ಪಿರುವ ಘಟನೆ ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ ನಡೆದಿದೆ.
ಮೆಡಕ್ನಲ್ಲಿನ ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬರುವ ಚೈನ್ ಸ್ನಾಚರ್ ಮತ್ತು ಖದೀರ್ನ ನಡುವೆ ಸಾಮ್ಯತೆ ಇದ್ದುದ್ದರಿಂದ ಜನವರಿ 29 ರಂದು ಖದೀರ್ನನ್ನು ತಪ್ಪಾಗಿ ಗುರುತಿಸಿ ಬಂಧಿಸಲಾಗಿದ್ದು, ಫೆಬ್ರವರಿ 3 ರಂದು ಬಿಡುಗಡೆಯಾದ ಖದೀರ್ ಹೈದರಾಬಾದ್ನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾಗಿದ್ದು, ಸಾವಿಗೂ ಮುನ್ನ ತೆಗೆದ ವಿಡಿಯೋ ಹೇಳಿಕೆಯಲ್ಲಿ ಖದೀರ್ ತನಗೆ ನೀಡಿದ ಚಿತ್ರಹಿಂಸೆಯನ್ನು ವಿವರಿಸಿದ್ದಾನೆ.
ಇನ್ನು ಶಂಕಿತನೊಂದಿಗಿನ ಹೋಲಿಕೆಯಿಂದಾಗಿ ತಪ್ಪಾಗಿ ಗುರುತಿಸಲ್ಪಟ್ಟಿದ್ದು, ತಂತ್ರಜ್ಞಾನದ ವೈಫಲ್ಯದಿಂದಾಗಿ ಖದೀರ್ ತನ್ನ ಜೀವನವನ್ನು ಕಳದುಕೊಂಡಿದ್ದಾನೆ. ಖದೀರ್ ಪ್ರಕರಣದಲ್ಲಿ ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನವನ್ನು (ಎಫ್ಆರ್ಟಿ) ಬಳಸಲಾಗಿದೆಯೇ ಎಂಬುದು ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲವಾದರೂ, ಸಿಸಿಟಿವಿ ಫೂಟೇಜ್ ಬಳಸಿ ಅವರನ್ನು ಗುರುತಿಸಲಾಗಿದೆ ಎಂದು ದೃಢಪಡಿಸಲಾಗಿದೆ.