ನವದೆಹಲಿ, ಫೆ 23 (DaijiworldNews/HR): ಭಾರತೀಯ ವಿಜ್ಞಾನಿಗಳು ಮಲೇರಿಯಾದ ಔಷಧವನ್ನ ಕಂಡುಹಿಡಿದಿದ್ದು, ದೇಶದ ಅನೇಕ ಭಾಗಗಳಲ್ಲಿ ಮಲೇರಿಯಾದಿಂದ ಪ್ರತಿ ವರ್ಷ ಸಾವಿರಾರು ಜನರು ಸಾಯುವ ಸಂಖ್ಯೆ ಇನ್ನಾದರೂ ಕಡಿಮೆಯಾಗಬಹುದು.
ಮಲೇರಿಯಾ ರೋಗಿಗಳ ಮರಣವನ್ನ ಕಡಿಮೆ ಮಾಡಲು ಈ ಔಷಧವು ಹೆಚ್ಚು ಸಹಾಯ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದು, ಪ್ರಸ್ತುತ, ಈ ಔಷಧದ ಪ್ರಯೋಗವು ನಡೆಯುತ್ತಿದೆ.
ಭುವನೇಶ್ವರ ಮೂಲದ ಇನ್ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸಸ್ ವಿಜ್ಞಾನಿಗಳು ಪ್ರಾಣಿಗಳ ಮೇಲೆ ಶಿಲೀಂಧ್ರ ವಿರೋಧಿ ಔಷಧವನ್ನ ಯಶಸ್ವಿಯಾಗಿ ಪರೀಕ್ಷಿಸಿದ್ದಾರೆ, ಇದು ಮಲೇರಿಯಾ ಸಾವುಗಳನ್ನ ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.
ಐಎಲ್ಎಸ್ ಡಾ.ವಿಶ್ವನಾಥನ್ ಅರುಣ್ ನಾಗರಾಜ್ ನೇತೃತ್ವದ ವಿಜ್ಞಾನಿಗಳು, ಆರ್ಟೆಮಿಸಿನಿನ್ ಆಧಾರಿತ ಸಂಯೋಜನೆಯ ಚಿಕಿತ್ಸೆ (ACT) ಮೂಲಕ ರೋಗಿಗಳಿಗೆ ಶಿಲೀಂಧ್ರ ವಿರೋಧಿ ಔಷಧ ಗ್ರಿಸೊಫುಲ್ವಿನ್ ನೀಡಿದರೆ ಮಲೇರಿಯಾ ಸಾವುಗಳನ್ನ ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ.