ನವದೆಹಲಿ, ಫೆ 24 (DaijiworldNews/HR): ಪ್ರತಿ ಬಾರಿ ಜಾರಿ ನಿರ್ದೇಶನಾಲ (ಇಡಿ) ದಾಳಿ ನಡೆಸಿದಾಗಲೆಲ್ಲ ಪ್ರಧಾನಿ ಮೋದಿ ಅವರನ್ನು ದೂರುವುದು ಏಕೆ? ಸದುದ್ದೇಶದಿಂದ ಕೂಡಿದ ಕಾರ್ಯಕ್ಕೆ ಶ್ಲಾಘನೆ ಮಾಡುವ ಬದಲು ಮೋದಿಯನ್ನೇಕೆ ದೂರುತ್ತೀರಿ ಎಂದು ಕೇಂದ್ರ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಭ್ರಷ್ಟಾಚಾರ ಕೊನೆಗಾಣಿಸುವುದು ಕೇಂದ್ರದ ಧ್ಯೇಯ, ಸರ್ಕಾರದಿಂದ ಆಗುತ್ತಿರುವ ಈ ಕೆಲಸ ವಿಪಕ್ಷ ನಾಯಕರಿಗೆ ಇಷ್ಟವಾಗುತ್ತಿಲ್ಲ, ಇಡಿ ದಾಳಿಯಾಗುತ್ತಿದ್ದಂತೆ ಪ್ರಧಾನಿ ಮೋದಿಯನ್ನು ದೂರುತ್ತಾರೆ ಎಂದರು.
ಇನ್ನು ಎಲ್ಲ ಭ್ರಷ್ಟಚಾರ ತೊಲಗಿದೆ ಎಂದು ಹೇಳೋಕೆ ಆಗೋದಿಲ್ಲ, ಆದರೆ ಪ್ರಧಾನಿ ಮೋದಿ ತಂತ್ರಜ್ಞಾನ ಬಳಸಿ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡಿದ್ದಾರೆ ಎಂದಿದ್ದಾರೆ.