ಬೆಂಗಳೂರು, ಫೆ 25 (DaijiworldNews/HR): ಕಾಂಗ್ರೆಸ್ ಪಕ್ಷವು ಈಗಾಗಲೇ ಗೃಹಜ್ಯೋತಿ, ಗೃಹಲಕ್ಷಿ ಯೋಜನೆಯನ್ನು ಘೋಷಣೆ ಮಾಡಿದ್ದು, ಇದೀಗ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ನೀಡುವುದಾಗಿ ಘೋಷಿಸಿದೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದು 3 ರೂ.ಬೆಲೆಯಲ್ಲಿ ಅಕ್ಕಿ ನೀಡಲು ಆರಂಭಿಸಿತ್ತು. 2013ರಲ್ಲಿ 'ಅನ್ನಭಾಗ್ಯ' ಯೋಜನೆ ನೀಡಿದ್ದೆವು. ಆಗ ಪ್ರತಿ ಸದಸ್ಯರಿಗೆ 7 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಿದ್ದೆವು ಎಂದರು.
ಇನ್ನು ಪ್ರಜಾಧ್ವನಿ ಯಾತ್ರೆಯಲ್ಲಿ ಅಕ್ಕಿ ಹೆಚ್ಚಿಸುವಂತೆ ಜನ ಕೇಳಿದ್ದಾರೆ. ಈ ಬಳಿಕ ನಾವು ಚರ್ಚಿಸಿ ಈ ಯೋಜನೆಯನ್ನು ಪಕ್ಷದ 3ನೇ ಗ್ಯಾರಂಟಿಯಾಗಿ ಘೋಷಿಸುತ್ತಿದ್ದೇವೆ. 10 ಕೆಜಿ ಅಕ್ಕಿ ನೀಡುವುದರಿಂದರ 3ರಿಂದ 4 ಸಾವಿರ ಕೋಟಿ ರೂ. ಗೂ ಹೆಚ್ಚು ವೆಚ್ಚ ತಗಲಬಹುದು. ಅದನ್ನು ನಾವು ನಿಭಾಯಿಸಲಿದ್ದೇವೆ ಎಂದು ಹೇಳಿದ್ದಾರೆ.