ನವದೆಹಲಿ, ಫೆ 25 (DaijiworldNews/MS): ಬಲಪಂಥೀಯ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮತ್ತು ಬಜರಂಗದಳವನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಬೇಕು ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನಂತೆ ನಿಷೇಧಿಸಬೇಕು ಇತ್ತಿಹಾದ್-ಎ-ಮಿಲಾತ್ ಕೌನ್ಸಿಲ್ ಮುಖ್ಯಸ್ಥ ಮೌಲಾನಾ ತೌಖೀರ್ ರಜಾ ಖಾನ್ ಆಗ್ರಹಿಸಿದ್ದಾರೆ.
ಹರ್ಯಾಣದ ಭಿವಾನಿಯಲ್ಲಿ ಇಬ್ಬರು ಮುಸ್ಲಿಂ ಯುವಕರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಈ ಹೇಳಿಕೆ ಬಂದಿದೆ. ಪಿಎಫ್ಐ ಬ್ಯಾನ್ ಮಾಡಿದ ರೀತಿಯಲ್ಲೇ ವಿಎಚ್ ಪಿ ಮತ್ತು ಬಜರಂಗದಳ ಬ್ಯಾನ್ ಮಾಡಿ ಎಂದು ಹೇಳಿದ್ದಾರೆ.
ಭಿವಾನಿ ಘಟನೆ ಫೆಬ್ರವರಿ 16 ರಂದು ನಡೆದಿದ್ದರೂ ನಾವು ಮೌನ ವಹಿಸಿದ್ದೇವೆ. ನಮ್ಮ ಮಕ್ಕಳ ಮೇಲೆ (ಜುನೈದ್ ಮತ್ತು ನಾಸಿರ್) ಸುಳ್ಳು ಆರೋಪಗಳನ್ನು ಹೊರಿಸಿ ಹತ್ಯೆ ಮಾಡಲಾಗಿದೆಆರೋಪಿಗಳನ್ನು ಬೆಂಬಲಿಸಿ ಸಭೆಗಳು ಮತ್ತು ಮಹಾಪಂಚಾಯತ್ಗಳು ನಡೆಯುವುದನ್ನು ನೋಡಿದಾಗ ನಮಗೆ ಕೊಲೆಗಳು ಮತ್ತು ಗುಂಪು ಹತ್ಯೆಗಳು ಭಾರತದಲ್ಲಿ ಸಾಮಾನ್ಯ ಎಂದು ಅನಿಸುತ್ತಿದೆ” ಎಂದು ಮೌಲಾನಾ ತೌಖೀರ್ ರಜಾ ಖಾನ್ ಹೇಳಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಹೇಗೆ ಬ್ಯಾನ್ ಮಾಡಿದರೋ ಹಾಗೆಯೇ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳವನ್ನೂ ಬ್ಯಾನ್ ಮಾಡಬೇಕು ಎಂದು ಅವರು ಆಗ್ರಹಿಸಿದರು.