ಸುಕ್ಮಾ, ಫೆ 25 (DaijiworldNews/DB): ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಡಿಆರ್ಜಿ ಅಧಿಕಾರಿಗಳು ಹುತಾತ್ಮರಾದ ಘಟನೆ ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಎಎಲ್ಐ ರಾಮುರಾಮ್ ನಾಗ್, ಸಹಾಯಕ ಕಾನ್ಸ್ಟೇಬಲ್ ಕುಂಜಮ್ ಜೋಗ ಮತ್ತು ಸೈನಿಕ ವನಜಮ್ ಭೀಮ ಹುತಾತ್ಮ ಅಧಿಕಾರಿಗಳು.
ಸುಕ್ಮಾ ಜಿಲ್ಲೆಯ ಜಾಗರಗುಂದ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಈ ಎನ್ಕೌಂಟರ್ ನಡೆದಿದೆ. ಎನ್ಕೌಂಟರ್ ಮುಂದುವರಿದಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.