ನವದೆಹಲಿ, ಫೆ 25 (DaijiworldNews/DB): ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಕಾಣುತ್ತಿದೆ. ದೇಶದ ಭವಿಷ್ಯಕ್ಕೆ ಇದೊಂದು ಪುನಶ್ಚೇತನದ ಕೊಡುಗೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಜೆಟ್ ಅಧಿವೇಶನದ ಬಳಿಕ ನಡೆದ ವೆಬಿನಾರ್ನಲ್ಲಿ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆಯು ಈ ಹಿಂದೆ ದೇಶೀಯತೆಗೆ ಅನುಗುಣವಾಗಿ ಇರಲಿಲ್ಲ. ಆದರೆ ಇದೀಗ ಎನ್ಇಪಿ ಜಾರಿ ಬಳಿಕ ಭವಿಷ್ಯದ ಬೇಡಿಕೆಗೆ ಪೂರಕವಾಗುವಂತೆ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳುತ್ತಿದೆ ಎಂದು ಪ್ರತಿಪಾದಿಸಿದರು.
ಎನ್ಇಪಿಯು ಶಿಕ್ಷಣ ವ್ಯವಸ್ಥೆಯಲ್ಲಿ ಪುನಶ್ಚೇತನ ಸೃಷ್ಟಿಸಿದೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ಹೊಸ ದಿಕ್ಕು ಸಿಗಲಿದೆ ಎಂದರು.
2023-24ನೇ ಸಾಲಿನ ಕೇಂದ್ರ ಬಜೆಟ್ ನಮ್ಮ ದೇಶವನ್ನು ಕೌಶಲ್ಯದ ರಾಜಧಾನಿಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಮಾರ್ಗಸೂಚಿಯಂತಿದೆ ಎಂದು ಪ್ರಧಾನಿ೯ ಮೋದಿ ಹೇಳಿದರು.