ರಾಯ್ಪುರ, ಫೆ 25 (DaijiworldNews/HR): ನಕ್ಸಲೀಯರೊಂದಿಗಿನ ಎನ್ಕೌಂಟರ್ನಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಸೇರಿದಂತೆ ಮೂವರು ಜಿಲ್ಲಾ ಮೀಸಲು ಗಾರ್ಡ್ (ಡಿಆರ್ಜಿ) ಸಿಬ್ಬಂದಿ ಹತರಾಗಿರುವ ಘಟನೆ ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಮೃತರನ್ನು ಎಎಸ್ಐ ರಾಮುರಾಮ್ ನಾಗ್, ಸಹಾಯಕ ಕಾನ್ಸ್ಟೇಬರ್ ಕುಂಜಮ್ ಜೋಗಾ ಮತ್ತು ವಂಜಮ್ ಭೀಮಾ ಎಂದು ಗುರುತಿಸಲಾಗಿದೆ.
ಜಗರ್ಗುಂಡ ಮತ್ತು ಕುಂಡಡ್ ಗ್ರಾಮದ ಬಳಿ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಗುಂಡಿನ ಕಾಳಗ ನಡೆದಿದೆ ಎಂದು ಬಸ್ತಾರ್ ವಲಯದ ಐಜಿಪಿ ಸುಂದರ್ ರಾಜ್ ಹೇಳಿದ್ದಾರೆ.
ಇನ್ನು ರಾಜಧಾನಿ ರಾಯ್ಪುರದಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಜಗರ್ಗುಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಕ್ಷಣಾ ತಂಡವು ಕಾರ್ಯಾಚರಣೆ ನಡೆಸುತ್ತಿತ್ತು.