ನವದೆಹಲಿ, ಫೆ 25 (DaijiworldNews/MS): ಭಾರತದಲ್ಲಿ ಕರ್ನಾಟಕದ ಪಾತ್ರವನ್ನು ಹನುಮಂತನು ನಿರ್ವಹಿಸಿದ್ದಾನೆ. ಹನುಮಂತನಿಲ್ಲದೆ ರಾಮನೂ ಇಲ್ಲ, ರಾಮಾಯಣವೂ ಆಗುತ್ತಿರಲಿಲ್ಲ ಕರ್ನಾಟಕ ಹೊರತು ಪಡಿಸಿ ಭಾರತವನ್ನ ಊಹಿಸಲು ಸಾದ್ಯವಿಲ್ಲಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಕರ್ನಾಟಕ ಸಂಘದ ಅಮೃತ ಮಹೋತ್ಸವದಲ್ಲಿ ಏಕ್ ಭಾರತ್ ಶ್ರೇಷ್ಠ ಭಾರತ್ ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ, ರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರು ಇರು, ಎಂತಾದರು ಇರು, ನೀನು ಕನ್ನಡವಾಗಿರು' ಅಮರ ವಾಣಿಯೊಂದಿಗೆ ಮಾತು ಆರಂಭಿಸಿದರು.
ಕರ್ನಾಟಕದ ಅಭಿವೃದ್ಧಿಗೊಳಿಸುವುದು ಕೇಂದ್ರದ ಮೊದಲ ಆದ್ಯತೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಒಂದು ಕಾಲದಲ್ಲಿ ಇಲ್ಲಿನ ಹಣ ವಿದೇಶದಲ್ಲಿ ವಿಯೋಗಿಸಲಾಗುತ್ತಿತ್ತು. ಆದರೆ ಇಂದು ಬೆಂಗಳೂರಿನಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಲಾಗುತ್ತಿದೆ. ಕರ್ನಾಟದಲ್ಲಿ ರೈಲ್ವೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇವೆ. 2023ರಲ್ಲಿ ಒಂದೇ ವರ್ಷದಲ್ಲಿ 7 ಸಾವಿರ ಕೋಟಿ ನೀಡಿದ್ದೇವೆ.
ಕರ್ನಾಟಕವಿಲ್ಲದೆ ನಾವು ಭಾರತವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಪುರಾಣ ಕಾಲದಿಂದಲೂ ನೋಡಿದರೆ ಭಾರತದಲ್ಲಿ ಕರ್ನಾಟಕದ ಪಾತ್ರವನ್ನು ಹನುಮಂತನು ನಿರ್ವಹಿಸಿದ್ದಾನೆ. ಹನುಮಂತನಿಲ್ಲದೆ ರಾಮನೂ ಇಲ್ಲ, ರಾಮಾಯಣವೂ ಆಗುತ್ತಿರಲಿಲ್ಲ ಎಂದರು.
ಜಗತ್ತು ಭಾರತವನ್ನು ಸಿರಿಧಾನ್ಯದ ಕೇಂದ್ರವನ್ನಾಗಿ ನೋಡಿದರೇ, ಭಾರತದ ಸಿರಿಧಾನ್ಯಗಳ ಪ್ರಮುಖ ಉತ್ಪಾದನಾ ಕೇಂದ್ರ ಕರ್ನಾಟಕವಾಗಿದೆ. ಬಿ.ಎಸ್ ಯಡಿಯೂರಪ್ಪನವರ ಕಾಲದಿಂದಲೂ ಕರ್ನಾಟಕದಲ್ಲಿ ಸಿರಿಧಾನ್ಯಗಳ ಮಹತ್ವದ ಬಗ್ಗೆ ಪ್ರಚಾರ ಮಾಡಲಾಗುತ್ತಿದ್ದು, ಕರ್ನಾಟಕದ ಶ್ರೀ ಅನ್ನ, ರಾಗಿ , ಜಗತ್ತಿಗೆ ತಲುಪುವ ಸಮಯ ಅತ್ಯಂತ ಹತ್ತಿರವಾಗಿದೆ ಎಂದರು.