ನವದೆಹಲಿ, ಫೆ 26 (DaijiworldNews/HR): ಪುಲ್ವಾಮಾ ದಾಳಿ ನಡೆದು ಸರಿಯಾಗಿ 10 ದಿನಗಳಲ್ಲಿ ಮತ್ತೊಂದು ದಾಳಿ ನಡೆಸಲು ಭಯೋತ್ಪಾದಕರು ಸಂಚು ರೂಪಿಸಿದ್ದರು ಎಂದು ನಿವೃತ್ತ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ಅವರು 'ಕಿತ್ನೆ ಘಾಜಿ ಆಯೆ, ಕಿತ್ನೆ ಘಾಜಿ ಗಯೇ' ಎಂಬ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
ಈ ಕುರಿತಾಗಿ ಪುಸ್ತಕದಲ್ಲಿ ಬರೆದಿರುವ ಅವರು, ಭಾರತೀಯ ಭದ್ರತಾ ಪಡೆಗಳು ಇಬ್ಬರು ಪಾಕಿಸ್ತಾನಿಗಳೂ ಸೇರಿದಂತೆ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡುವ ಮೂಲಕ ಇದೇ ರೀತಿಯ ಮತ್ತೊಂದು ಆತ್ಮಾಹುತಿ ದಾಳಿಯನ್ನು ತಪ್ಪಿಸಿದ್ದಾರೆ ಎಂದಿದ್ದಾರೆ.
2019ರ ಫೆಬ್ರವರಿಯಲ್ಲಿಯೇ ಯೋಜಿಸಲಾಗಿದ್ದ ಆತ್ಮಹತ್ಯಾ ಬಾಂಬರ್ ಉಗ್ರನೊಬ್ಬ ತನ್ನ ಉದ್ದೇಶಗಳನ್ನು ಸೂಚಿಸಲು ವಿಡಿಯೋ ಪ್ರದರ್ಶನ, ಸ್ಫೋಟಕಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಮಾಡಿದ ಇದೇ ರೀತಿಯ ಆತ್ಮಹತ್ಯಾ ದಾಳಿಯ ಬಗ್ಗೆ ಅನೇಕರಿಗೆ ತಿಳಿದಿಲ್ಲ ಎಂದು ಬರೆದಿದ್ದಾರೆ.