ಬೆಂಗಳೂರು,ಮಾ.16(AZM):ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯಾದ್ಯಂತ ಹರಿಯುವ ಅಕ್ರಮ ಹಣವನ್ನು ಪತ್ತೆ ಹಚ್ಚಲು ಮನಿ ಕಮಾಂಡೋ ಪಡೆ ರಾಜ್ಯಕ್ಕೆ ಆಗಮಿಸಿದೆ.
ಚುನಾವಣಾ ಆಯೋಗ ಅಕ್ರಮ ಹಣದ ಕುರಿತು ಈಗಾಗಲೇ ಎಚ್ಚರವಹಿಸಿದ್ದು, ಅಕ್ರಮ ಹಣ ಸಾಗಾಟದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ. ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ 250 ಮನಿ ಕಮಾಂಡೋ ಅಧಿಕಾರಿಗಳ ತಂಡ ಬಂದಿಳಿದಿದ್ದು, ರಾಜ್ಯದಲ್ಲಿ ಹದ್ದಿನ ಕಣ್ಣು ಇಡಲಿದ್ದಾರೆ.
ಈಗಾಗಲೇ 28 ಲೋಕಸಭಾ ವ್ಯಾಪ್ತಿಯ 224 ಕ್ಷೇತ್ರಗಳಲ್ಲಿ ಒಬ್ಬೊಬ್ಬ ಅಧಿಕಾರಿ ನೇಮಕವಾಗಿದ್ದಾರೆ. ಅದರಲ್ಲೂ ಅತೀ ಪ್ರಮುಖ ಕ್ಷೇತ್ರಗಳಾದ ಮಂಡ್ಯ, ಹಾಸನ, ಕಲಬುರಗಿ, ಬೆಂಗಳೂರು ಉತ್ತರ ಸೇರಿದಂತೆ, ಶಿವಮೊಗ್ಗ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮನಿ ಕಮಾಂಡೋ ಪಡೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲಿದ್ದಾರೆ.
ಮಂಡ್ಯ ಒಂದೇ ಜಿಲ್ಲೆಗೆ ಸುಮಾರು 16 ಮಂದಿ ಮನಿ ಕಮಾಂಡೋಗಳನ್ನು ನೇಮಕ ಮಾಡಲಾಗಿದೆ. ಹಾಗೆಯೇ ಬೆಂಗಳೂರು ನಗರದಲ್ಲೇ 35ಕ್ಕೂ ಹೆಚ್ಚಿನ ಮನಿ ಕಮಾಂಡೋ ತಂಡ ಬೀಡುಬಿಟ್ಟಿದೆ.