ನವದೆಹಲಿ, ಫೆ 26 (DaijiworldNews/DB): ಮುಂಬೈ ಸರಣಿ ಬಾಂಬ್ ಸ್ಪೋಟದ ಆರೋಪಿ, ಭೂಗದ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಡಿ-ಕಂಪೆನಿಯಿಂದ ಭಯೋತ್ಪಾದನೆಗೆ ಹಣ ಸಹಾಯ ಮತ್ತು ಡ್ರಗ್ಸ್ ಕಳ್ಳ ಸಾಗಣೆ ಸಂಬಂಧಿಸಿ ತನಿಖೆ ನಡೆಸುವ ಸಲುವಾಗಿ ಎನ್ಐಎಯು ಐವರು ಸದಸ್ಯರನ್ನೊಳಗೊಂಡ ತಂಡವನ್ನು ದುಬೈಗೆ ಕಳುಹಿಸಿದೆ.
ತಂಡದವಲ್ಲಿ ಇಂಟೆಲಿಜೆನ್ಸ್ ಬ್ಯೂರೋ, ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯುನಿಟ್, ನಾರ್ಕೊಟಿಕ್ ಕಂಟ್ರೋಲ್ ಬ್ಯೂರೋದ ಅಧಿಕಾರಿಗಳಿದ್ದು, ದಾವೂದ್ ಇಬ್ರಾಹಿಂ ದುಬೈನಲ್ಲಿ ನಡೆಸುತ್ತಿರುವ ವಿವಿಧ ಚಟುವಟಿಕೆಗಳ ಕುರಿತು ಈ ತಂಡವು ತನಿಖೆ ನಡೆಸಲಿದೆ.
ಭಯೋತ್ಪಾದನೆ ಮತ್ತು ಅಪರಾಧ ಚಟುವಟಿಕೆಗಳ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ದಾವೂದ್ ಇಬ್ರಾಹಿಂ, ಆತನ ಸಹಚರ ಛೋಟಾ ಶಕೀಲ್ ಮತ್ತು ಇತರ ಮೂವರ ವಿರುದ್ದ ಕಳೆದ ನವೆಂಬರ್ನಲ್ಲಿ ರಾಷ್ಟ್ರೀಯ ತನಿಖಾ ದಳವು ಚಾರ್ಜ್ ಶೀಟ್ ಸಲ್ಲಿಸಿತ್ತು. 1992ರ ಮುಂಬೈ ಸರಣಿ ಬಾಂಬ್ ಸ್ಪೋಟದ ಬಳಿಕ ದಾವೂದ್ ದೇಶ ತೊರೆದಿದ್ದಾನೆ. ಆತ ಪಾಕಿಸ್ತಾನದ ಕರಾಚಿಯಲ್ಲಿ ಆಶ್ರಯ ಪಡೆಯುತ್ತಿದ್ದಾನೆಂದು ಹೇಳಲಾಗುತ್ತಿದೆ.