ಜಮ್ಮು ಕಾಶ್ಮೀರ, ಫೆ 26 (DaijiworldNews/HR): ಪುಲ್ವಾಮಾದ ಸ್ಥಳೀಯ ಮಾರುಕಟ್ಟೆಗೆ ತೆರಳುತ್ತಿದ್ದಾಗ ಭಯೋತ್ಪಾದಕರು ಗುಂಡು ಹಾರಿಸಿದ ಪರಿಣಾಮ 40 ವರ್ಷದ ನಾಗರಿಕನೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಉಗ್ರರ ಗುಂಡಿಗೆ ಬಲಿಯಾದವರನ್ನು ಸಂಜಯ್ ಶರ್ಮಾ ಕಾಶ್ಮೀರಿ ಪಂಡಿತ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಶ್ಮೀರ ಪೊಲೀಸರು ಸ್ಥಳೀಯ ಮಾರುಕಟ್ಟೆಗೆ ಹೋಗುವಾಗ ಭಯೋತ್ಪಾದಕರು ಪುಲ್ವಾಮಾದ ಅಲ್ಪಸಂಖ್ಯಾತ ಸಂಜಯ್ ಶರ್ಮಾ ಎಂಬ ಅಲ್ಪಸಂಖ್ಯಾತ ನಾಗರಿಕನ ಮೇಲೆ ಗುಂಡು ಹಾರಿಸಿದ್ದು, ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈಗ ಅವರ ಪ್ರದೇಶದಲ್ಲಿ ಸಶಸ್ತ್ರ ಪಡೆಗಳು ಸುತ್ತುವರೆದಿದ್ದು, ಭಯೋತ್ಪಾದಕರನ್ನು ಮಟ್ಟ ಹಾಕುವ ಕಾರ್ಯದಲ್ಲಿ ನಿರತವಾಗಿದೆ ಎಂದು ತಿಳಿಸಿದ್ದಾರೆ.