ಹುಬ್ಬಳ್ಳಿ, ಫೆ 26 (DaijiworldNews/MS): ಕುಮಾರಸ್ವಾಮಿ ಮೊದಲು ಕುಟುಂಬ ಸರಿ ಮಾಡಿಕೊಳ್ಳಲಿ, ನಂತರ ರಾಜ್ಯ ಆಳ್ವಿಕೆ ಮಾಡಲು ಬರಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದ್ದಾರೆ.
ಹಾಸನ ಜೆಡಿಎಸ್ ಟಿಕೆಟ್ ಕಿತ್ತಾಟಕ್ಕೆ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ತಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಟಿಕೆಟ್ ಕೊಟ್ಟರೂ ಅವರಲ್ಲಿ ಟಿಕೆಟ್ಗಾಗಿ ಬಡೆದಾಟ ಸಾಮಾನ್ಯ. ಹೀಗಾಗಿ ಮೊದಲು ಕುಮಾರಸ್ವಾಮಿ ತಮ್ಮ ಮನೆಯನ್ನು ಮೊದಲು ನಿರ್ವಹಿಸುವುದು ಉತ್ತಮ. ಕುಟುಂಬದ 10-12 ಮಂದಿ ಚುನಾವಣೆಯಲ್ಲಿ ನಿಂತರೂ ಅವರಿಗೆ ತೃಪ್ತಿ ಇಲ್ಲ. ಆದ್ರೂ ಕುಟುಂಬಸ್ಥರು ಪರಸ್ಪರ ಬಡಿದಾಡುತ್ತಾರೆ. ಕುಟುಂಬವನ್ನೇ ನಿರ್ವಹಿಸಲಾಗದವರು ರಾಜ್ಯವನ್ನು ಹೇಗೆ ನಿಭಾಯಿಸುತ್ತಾರೆ' ಎಂದು ಪ್ರಶ್ನಿಸಿದರು.
ತೃತೀಯ ಶಕ್ತಿ ಒಟ್ಟುಗೂಡಿಸುವ ಪ್ರಯತ್ನವೂ ಫಲ ನೀಡಲಿಲ್ಲ, ಏನಾದರೂ ಮಾಡಿ ಪ್ರಧಾನಿಯಾಗಬೇಕು ಎನ್ನುವ ಉದ್ದೇಶ ಅವರದ್ದು. ಉದಾತ್ತ ಮನೋಭಾವ ಇದ್ದರೆ ತೃತೀಯ ರಂಗ ರಚನೆಯಾಗುತ್ತಿತ್ತು.ಅವರಲ್ಲಿ ಒಗ್ಗಟ್ಟು ಹಾಗೂ ಸ್ಪಷ್ಟ ಉದ್ದೇಶವಿಲ್ಲದ್ದರಿಂದ ಅದು ಕೂಡಾ ಸಾಧ್ಯವಾಗುತ್ತಿಲ್ಲ ಎಂದರು.