ರಾಯಪುರ, ಫೆ 26 (DaijiworldNews/HR): ಸತ್ಯ ಹೊರಬರುವವರೆಗೂ ಗೌತಮ್ ಅದಾನಿ ಬಗ್ಗೆ ನಮ್ಮ ಕಾಂಗ್ರೆಸ್ ಪಕ್ಷ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತದೆ ಎಂದು ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನಲ್ಲಿ ಉದ್ಯಮಿಗೆ ಬೆಂಬಲವಾಗಿನಿಂತ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಇಡೀ ಸಂಪತ್ತನ್ನು ಲೂಟಿ ಹೊಡೆಯುವ ಮೂಲಕ ಅದಾನಿ ದೇಶದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ನಾವು ಸಂಸತ್ತಿನಲ್ಲಿ ಅದಾನಿಯೊಂದಿಗೆ ಪ್ರಧಾನಿಯ ಸಂಬಂಧವೇನು ಎಂದು ಕೇಳಿದಾಗ ನಮ್ಮ ಸಂಪೂರ್ಣ ಭಾಷಣವನ್ನೇ ತೆಗೆದುಹಾಕಲಾಗಿದೆ. ಆದರೆ ಅದಾನಿ ಸತ್ಯ ಹೊರಬರುವವರೆಗೆ ನಾವು ಸಂಸತ್ತಿನಲ್ಲಿ ಸಾವಿರಾರು ಬಾರಿ ಪ್ರಶ್ನೆ ಕೇಳುತ್ತೇವೆ ಎಂದಿದ್ದಾರೆ.
ಇನ್ನು ಅದಾನಿ ಅವರ ಕಂಪನಿ ದೇಶಕ್ಕೆ 'ಹಾನಿ ಮಾಡುತ್ತಿದೆ' ಮತ್ತು 'ದೇಶದ ಸಂಪೂರ್ಣ ಮೂಲಸೌಕರ್ಯವನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.