ಗುಜರಾತ್, ಫೆ 26 (DaijiworldNews/MS): ಗುಜರಾತ್ ನ ರಾಜ್ ಕೋಟ್ ನಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಮಧ್ಯಾಹ್ನ 3 ಗಂಟೆ 21 ನಿಮಿಷ 12 ಸೆಕೆಂಡ್ ನಲ್ಲಿ ಭೂಮಿ ಕಂಪಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ರಾಜ್ಕೋಟ್ನ ಸುಮಾರು 270 ಕಿಲೋಮೀಟರ್ ವಾಯುವ್ಯದಲ್ಲಿ ಅದರ ಕೇಂದ್ರಬಿಂದು 3:21ಕ್ಕೆ ದಾಖಲಾಗಿದೆ.ರಾಜ್ಕೋಟ್ನ ಉಪ್ಲೆಟಾ, ಜೆಟ್ಪುರ, ಧೋರಜಿ, ಗೊಂಡಾಲ್ ನಗರಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಾದ ಚಾರ್ಖಾಡಿ, ಪಾಟೀಡಾಲ್, ಜೆತಲ್ಸರ್, ಮೋತಿವಾಡಿ, ಭುಖಿ, ಮುರ್ಖಾಡ, ಇಸ್ರಾದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಘಟನೆಯಿಂದ ಜನರು ಆತಂಕಗೊಂಡು ಹೊರಗೆ ಓಡಿಬಂದಿದ್ದಾರೆ. ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.
ಗುಜರಾತ್ನ ಅಮ್ರೇಲಿ ಜಿಲ್ಲೆಯಲ್ಲಿ ಎರಡು ದಿನಗಳಲ್ಲಿ ಮೂರು ಸಣ್ಣ ಕಂಪನಗಳು ದಾಖಲಾಗಿವೆ ಎಂದು ಇನ್ಸ್ಟಿಟ್ಯೂಟ್ ಆಫ್ ಸಿಸ್ಮಾಲಾಜಿಕಲ್ ರಿಸರ್ಚ್ (ISR) ನ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.